ADVERTISEMENT

ಮೂರನೇ ದಿನವು ಕಲಾಪ ನುಂಗಿಹಾಕಿದ ಕಲ್ಲಿದ್ದಲು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2012, 7:35 IST
Last Updated 23 ಆಗಸ್ಟ್ 2012, 7:35 IST

ನವದೆಹಲಿ (ಐಎಎನ್‌ಎಸ್): ~ಕಲ್ಲಿದ್ದಲು~ ಗದ್ದಲವು ಸಂಸತ್ತಿನಲ್ಲಿ  ಮತ್ತೊಮ್ಮೆ ಪ್ರತಿಧ್ವನಿಸಿದ ಪರಿಣಾಮ ಗುರುವಾರವು ಸಹ  ಉಭಯ ಸದನಗಳನ್ನು ಮಧ್ಯಾಹ್ನದವರೆಗೆ ಮುಂದೂಡಿದ ಪ್ರಸಂಗ ನಡೆಯಿತು.

ವಿರೋಧ ಪಕ್ಷದವರು ಮೂರನೇ ದಿನವಾದ ಗುರುವಾರವೂ ಪ್ರಧಾನಿ ಮನಮೋಹನ್ ಸಿಂಗ್ ಅವರ ರಾಜೀನಾಮೆಗೆ ಬಿಗಿಪಟ್ಟು ಹಿಡಿದು ಪ್ರತಿಭಟಿಸಿದರು.

ಬೆಳಿಗ್ಗೆ 11ಕ್ಕೆ ಲೋಕಸಭೆಯು ಆರಂಭವಾಗುತ್ತಿದ್ದಂತೆ ಬಿಜೆಪಿ ಪಕ್ಷದ ಸದಸ್ಯರು ಸದನದ ಕಲಾಪ ನಡೆಯಲು ಅನುಮತಿ ನೀಡದೆ, ಪ್ರಧಾನಿ ಅವರು ರಾಜೀನಾಮೆಯನ್ನು ನೀಡಲೇ ಬೇಕು ಎಂದು ಘೋಷಣೆಯನ್ನು ಕೂಗತ್ತಾ ಸದನದಲ್ಲಿ ಗದ್ದಲ ಎಬ್ಬಿಸಿ ಪ್ರತಿಭಟಿಸಿದರು. ಇದರಿಂದ ಸ್ಪೀಕರ್ ಮೀರಾ ಕುಮಾರಿ ಅವರು ಉಭಯ ಸದನಗಳನ್ನು ಮಧ್ಯಾಹ್ನದವರೆಗೆ ಮುಂದೂಡಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.