ADVERTISEMENT

ಮೇವು ಹಗರಣದಲ್ಲಿ ಲಾಲೂ ವಿರುದ್ಧ ದೋಷಾರೋಪ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 8:50 IST
Last Updated 1 ಮಾರ್ಚ್ 2012, 8:50 IST

ಪಟ್ನಾ (ಐಎಎನ್‌ಎಸ್): ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂಪ್ರಸಾದ್ ಹಾಗೂ ಜಗನ್ನಾಥ ಮಿಶ್ರಾ ಸೇರಿದಂತೆ ಇತರ 32 ಮಂದಿ ವಿರುದ್ಧ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಗುರುವಾರ ಬಿಹಾರದ ನ್ಯಾಯಾಲಯವು ದೋಷಾರೋಪ ಹೊರಿಸಿದೆ.

1995-1996ರ ಅವಧಿಯಲ್ಲಿ ಲಾಲೂ ಮುಖ್ಯಮಂತ್ರಿಯಾಗಿದ್ದಾಗ ಮೇವು ಖರೀದಿಸಲೆಂದು ಖಜಾನೆಯಿಂದ ಅಕ್ರಮವಾಗಿ 47 ಲಕ್ಷ ರೂ.ಗಳನ್ನು ಪಡೆದ ಹಗರಣ ಇದಾಗಿದೆ.

ಇದಕ್ಕೆ ಸಂಬಂಧಿಸಿದಂತೆ 2003ರಲ್ಲಿ ಸಿಬಿಐ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಇದೀಗ ನ್ಯಾಯಾಲಯವು ಲಾಲೂ ಸೇರಿದಂತೆ 32 ಮಂದಿಯ ವಿರುದ್ಧ ದೋಷಾರೋಪ ಹೊರಿಸಿ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.

ಇದರಿಂದ ಲಾಲೂ ಅವರಿಗೆ ಭಾರಿ ಹಿನ್ನಡೆಯಾದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.