ADVERTISEMENT

ಮೇವು ಹಗರಣ: 41 ಆರೋಪಿಗಳಿಗೆ ಜೈಲು, ದಂಡ

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 19:30 IST
Last Updated 18 ಜನವರಿ 2012, 19:30 IST

ರಾಂಚಿ (ಐಎಎನ್‌ಎಸ್): ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯ ಬುಧವಾರ ಮೇವು ಹಗರಣದ 41 ಆರೋಪಿಗಳಿಗೆ ನಾಲ್ಕರಿಂದ ಏಳು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಮತ್ತು ರೂ 2 ಲಕ್ಷದಿಂದ 30 ಲಕ್ಷಗಳವರೆಗೆ ದಂಡ ವಿಧಿಸಿ ತೀರ್ಪು ನೀಡಿದೆ.

ಈ ಆರೋಪಿಗಳಿಗೆ ವಿಶೇಷ ಸಿಬಿಐ ನ್ಯಾಯಾಧೀಶ ಪಿ.ಕೆ. ಸಿಂಗ್ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು. ಹಗರಣದ ಒಟ್ಟು 73 ಆರೋಪಿಗಳಲ್ಲಿ ಒಂಬತ್ತು ಮಂದಿ ಮೃತಪಟ್ಟ್ದ್ದಿದಾರೆ.

ಮೂವರು ಸಿಬಿಐಯ ಮಾಫಿ ಸಾಕ್ಷಿಗಳಾಗಿ ಪರಿವರ್ತನೆಯಾಗಿದ್ದಾರೆ. ಉಳಿದ 61 ಆರೋಪಿಗಳಲ್ಲಿ 20 ಮಂದಿಗೆ ಸೋಮವಾರವೇ ಒಂದರಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ಪಾವತಿಯ ಶಿಕ್ಷೆಯ ಪ್ರಮಾಣನ್ನು ಪ್ರಕಟಿಸಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.