ADVERTISEMENT

ಮೈತ್ರಿ ಒತ್ತಡದ ಬಜೆಟ್

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 17:25 IST
Last Updated 25 ಫೆಬ್ರುವರಿ 2011, 17:25 IST

ನವದೆಹಲಿ (ಐಎಎನ್‌ಎಸ್): ಸಚಿವೆ ಮಮತಾ ಬ್ಯಾನರ್ಜಿ ಅವರು ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಿರುವ ಬಜೆಟ್ ತಂತ್ರಗಾರಿಕೆಯಿಂದ ಕೂಡಿದ್ದು, ಮೈತ್ರಿ ಒತ್ತಡಕ್ಕೆ ಮಣಿದು ಸಿದ್ಧಪಡಿಸಿದಂತಿದೆ ಎಂದು ಸಿಪಿಎಂ ದೂರಿದೆ.

ಈ ಬಜೆಟ್ ಉದ್ದೇಶಹೀನವಾಗಿದ್ದು, ಇಂತಹದ್ದೊಂದು ಬಜೆಟ್ ಮಂಡಿಸಲು ಪ್ರಧಾನಿ ಅವಕಾಶ ನೀಡಿರುವುದಾದರೂ ಹೇಗೆ ಎಂದು ಸಿಪಿಎಂ ರಾಜ್ಯಸಭಾ ಸದಸ್ಯ ಸೀತಾರಾಮ್ ಯೆಚೂರಿ ಪ್ರಶ್ನಿಸಿದ್ದಾರೆ.

ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ತಯಾರಿಸಲಾಗಿದೆ. ಬಜೆಟ್‌ನಲ್ಲಿ ಮತ್ತೇನೂ ಇಲ್ಲ ಎಂದು ಹೇಳಿದರು.

‘ಪಶ್ಚಿಮ ಬಂಗಾಳ ಗಮನದಲ್ಲಿಟ್ಟುಕೊಂಡು ಹಲವು ಯೋಜನೆಗಳನ್ನು ಪ್ರಕಟಿಸಿರುವ ಮಮತಾ ದೀದಿ, ಇವನ್ನು ಬಹಳ ಚಾಣಾಕ್ಷತನದಿಂದ 12ನೇ ಪಂಚವಾರ್ಷಿಕ ಯೋಜನೆಯಡಿ ಬರುವ ಪ್ರಧಾನ ಮಂತ್ರಿಗಳ ರೈಲ್ವೆ ವಿಕಾಸ ಯೋಜನೆಯಲ್ಲಿ ಸೇರಿಸಿದ್ದಾರೆ. ಕಳೆದ ಬಾರಿ ಘೋಷಿಸಿದ್ದ ಅನೇಕ ಯೋಜನೆಗಳೇ ಇನ್ನೂ ಜಾರಿಗೆ ಬಂದಿಲ್ಲ. ಹೀಗಾಗಿ ಹೊಸ ಯೋಜನೆಗಳಿಗೆ ಅರ್ಥವಿಲ್ಲ’ ಎಂದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.