
ಪ್ರಜಾವಾಣಿ ವಾರ್ತೆನವದೆಹಲಿ (ಪಿಟಿಐ): ಭದ್ರತೆ ಕಾರಣ ಮೊಬೈಲ್ ಕರೆ ಮಾಡಿದ ಸ್ಥಳ ಪತ್ತೆ ಮಾಡಲು ಅನುಕೂಲವಾಗುವಂತಹ ಸೇವೆಯನ್ನು ಮೇ 31ರೊಳಗೆ ಆರಂಭಿಸುವಂತೆ ದೂರಸಂಪರ್ಕ ಸೇವಾ ಪ್ರವರ್ತಕರಿಗೆ ಸರ್ಕಾರ ಸೂಚಿಸಿದೆ.
ಇಂತಹ ವ್ಯವಸ್ಥೆಯಿಂದ ಕಲ್ಪಿಸಿದರೆ ಕರೆ ಮಾಡಿದ ಸಮಯದಲ್ಲೇ ಕರೆ ಮಾಡಿದ ಸ್ಥಳವನ್ನು ನಿರ್ದಿಷ್ಟವಾಗಿ ತಿಳಿಯಬಹುದು ಮತ್ತು ಇಂತಹ ಮಾಹಿತಿಯನ್ನು ಭದ್ರತಾ ಸಂಸ್ಥೆಗಳಿಗೂ ಒದಗಿಸಬಹುದು ಎಂದು ದೂರಸಂಪರ್ಕ ಇಲಾಖೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.