ಅಹಮದಾಬಾದ್ (ಐಎಎನ್‌ಎಸ್): ಸೆಪ್ಟೆಂಬರ್ 17 ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ. ಅಂದು ತಮ್ಮ ತಾಯಿ ಹೀರಾಬಾ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲು ಮನೆಗೆ ತೆರಳಲಿರುವ ಮೋದಿ ಅವರನ್ನು ಸ್ವಾಗತಿಸಲು ಕುಟುಂಬದ ಸದಸ್ಯರು ಭರ್ಜರಿ ತಯಾರಿ ನಡೆಸಿದ್ದಾರೆ.
ಮೋದಿ ಅವರ ತಾಯಿ ಹೀರಾಬಾ ಅವರು ಗುಜರಾತಿ ವಿಶೇಷ ಸಿಹಿ ತಿನಿಸುಗಳಾದ ಚುರ್ಮಾ ಲಡ್ಡು (ಲಾಡು), ಲಪ್ಸಿ ಮತ್ತು ಕನ್ಸರ್ ತಯಾರಿಯಲ್ಲಿ ತೊಡಗಿದ್ದು, ಮಗನ ಬರುವಿಕೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.