ADVERTISEMENT

ಮೋದಿ ಪ್ರಳಯಕ್ಕೆ ಬೆದರಿ ವಿರೋಧ ಪಕ್ಷಗಳೆಲ್ಲಾ ಪ್ರಾಣಿಗಳಂತೆ ಒಗ್ಗೂಡಿವೆ: ಅಮಿತ್ ಶಾ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 15:57 IST
Last Updated 6 ಏಪ್ರಿಲ್ 2018, 15:57 IST
ಅಮಿತ್ ಶಾ  ಕೃಪೆ: ಟ್ವಿಟ್ಟರ್
ಅಮಿತ್ ಶಾ ಕೃಪೆ: ಟ್ವಿಟ್ಟರ್   

ನವದೆಹಲಿ: ವಿರೋಧ ಪಕ್ಷಗಳೆಲ್ಲಾ ಒಂದಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿವೆ. ಪ್ರಳಯ ಬಂದಾಗ ಹಾವು, ಮುಂಗುಸಿ, ಬೆಕ್ಕು, ನಾಯಿ, ಚಿರತೆ ಮತ್ತು ಸಿಂಹಗಳೆಲ್ಲಾ ನೀರಿನ ಮಟ್ಟ ಹೆಚ್ಚಾಗುತ್ತಿದ್ದಂತೆ ಮರ ಹತ್ತಿ ರಕ್ಷಣೆ ಪಡೆಯುತ್ತವೆ ಎಂದು ವಿಪಕ್ಷಗಳನ್ನು ಅಮಿತ್ ಶಾ ಗೇಲಿ ಮಾಡಿದ್ದಾರೆ.

ಬಿಜೆಪಿಯ 38ನೇ ಸಂಸ್ಥಾಪನಾ ದಿನದ ಅಂಗವಾಗಿ ಮುಂಬೈನಲ್ಲಿ ನಡೆದ ರ‍್ಯಾಲಿಯಲ್ಲಿ ಅಮಿತ್ ಶಾ ವಿರೋಧ ಪಕ್ಷಗಳ ವಿರುದ್ದ ಟೀಕಾ ಪ್ರಹಾರ ಮಾಡಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷವನ್ನು ಪರಾಭವಗೊಳಿಸಲು ಬಿಜೆಪಿ ವಿರೋಧಿ ಪಕ್ಷಗಳೆಲ್ಲವೂ ಒಂದಾಗಿರುವ ವಿಷಯವನ್ನು ಉಲ್ಲೇಖಿಸಿ ಶಾ ವಾಗ್ದಾಳಿ ನಡೆಸಿದ್ದಾರೆ.

ವಿರೋಧ ಪಕ್ಷಗಳನ್ನು ಪ್ರಾಣಿಗಳಿಗೆ ಹೋಲಿಸಿದ ಶಾ: ಕಾಂಗ್ರೆಸ್ ಆಕ್ಷೇಪ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.