ADVERTISEMENT

ಯಾಸಿನ್‌್ ಬಂಟನ ಮೇಲೆ ಜೈಲಿನಲ್ಲಿ ಕೈದಿಯಿಂದ ಹಲ್ಲೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 19:30 IST
Last Updated 22 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ): ಇಂಡಿಯನ್‌ ಮುಜಾಹಿದೀನ್‌ (ಐಎಂ) ಸಹ ಸಂಸ್ಥಾ­ಪಕ ಯಾಸಿನ್‌ ಭಟ್ಕಳನ ಬೆಂಬಲಿಗ ಫಾಸಿ ಮಹಮ್ಮದ್‌್ ಮೇಲೆ ಕೈದಿ­ಯೊಬ್ಬ ಹಲ್ಲೆ ಮಾಡಿದ ಘಟನೆ ಬಿಗಿ ಭದ್ರತೆಯ ತಿಹಾರ್‌ ಜೈಲಿನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಭಯೋತ್ಪಾದಕ ಚಟುವಟಿಕೆ  ಆರೋ­ಪದ ಮೇಲೆ ಫಾಸಿ ಮಹಮ್ಮದ್‌ 2012­ರಲ್ಲಿ ಸೌದಿ ಅರೇಬಿಯಾದಿಂದ ಭಾರತಕ್ಕೆ ಹಸ್ತಾಂತರಗೊಂಡಿದ್ದ.
‘ಕೊಲೆ ಪ್ರಕರಣವೊಂದರಲ್ಲಿ ಶಿಕ್ಷೆ ಅನು­ಭವಿಸುತ್ತಿರುವ ಸಿಮ್ರಾನ್‌ ಎಂಬಾತ ಹಲ್ಲೆ ಮಾಡಿದ ಪರಿಣಾಮ ಫಾಸಿ ಮಹ­ಮ್ಮದ್‌ ಕಾಲಿಗೆ ಗಾಯ­ವಾಗಿದೆ’ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.  ದೆಹಲಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾರ್ಖಾನೆ ಸ್ಥಾಪನೆಗೆ ಸಂಬಂಧಿ­ಸಿದ ಪ್ರಕರಣದಲ್ಲಿ ಫಾಸಿ­ಯನ್ನು ಶನಿವಾರ ಸ್ಥಳೀಯ ನ್ಯಾಯಾ­ಲಯಕ್ಕೆ ಗಾಲಿ ಕುರ್ಚಿ­­ಯಲ್ಲಿ ಕರೆತರ­ಲಾಯಿತು.

ಆಗ ಆತ ಜೈಲಿನಲ್ಲಿ ತನ್ನ ಮೇಲಾದ ಹಲ್ಲೆ ವಿಷಯವನ್ನು ನ್ಯಾಯಾಧೀಶರಿಗೆ ತಿಳಿಸಿದ.   ಈ ವಿಷಯವಾಗಿ ವಿವರ ವರದಿ ನೀಡು­ವಂತೆ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ದಯಾ ಪ್ರಕಾಶ್‌ ಜೈಲು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಫಾಸಿಗೆ  ಏಮ್ಸ್‌­ನಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲು ಪೊಲೀ­ಸರಿಗೆ ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.