ADVERTISEMENT

ಯುವತಿಯರ ವಿರುದ್ಧದ ಪ್ರಕರಣ ಕೈಬಿಡಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2012, 20:28 IST
Last Updated 29 ನವೆಂಬರ್ 2012, 20:28 IST

ಮುಂಬೈ (ಪಿಟಿಐ): ವಿವಾದ, ಬಂದ್ ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತು ನಂತರ ಮುಂಬೈ ಬಂದ್ ವಿರುದ್ಧ ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ಬರೆದು ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾದ ಇಬ್ಬರು ಯುವತಿಯರ ಪ್ರಕರಣವನ್ನು ಕೈಬಿಡಲು ಮಹಾರಾಷ್ಟ್ರ ಪೊಲೀಸರು ನಿರ್ಧರಿಸಿದ್ದಾರೆ.

ಘಟನೆಯಲ್ಲಿ ಬಂಧಿಸಲಾಗಿದ್ದ ಪಲ್ಗಾರ್‌ನ ಇಬ್ಬರು ಯುವತಿಯರ ವಿರುದ್ಧ ಯಾವುದೇ ಆರೋಪ ಪಟ್ಟಿ ದಾಖಲಾಗಿಲ್ಲ. ಈಗ ಆ ಪ್ರಕರಣದ ಪರಿಸಮಾಪ್ತಿ ವರದಿಯನ್ನು ಸಿದ್ಧಪಡಿಸಬೇಕಿದೆ' ಎಂದು ಪೊಲೀಸ್ ಮಹಾ ನಿರ್ದೇಶಕ ಸಂಜೀವ್ ದಯಾಳ್ ತಿಳಿಸಿದ್ದಾರೆ. ತನಿಖಾ ಧಿಕಾರಿಗಳು ಆರೋಪಿಗಳ ವಿರುದ್ಧ ಯಾವುದೇ ಮೊಕದ್ದಮೆ ದಾಖಲಾಗಿಲ್ಲ ಎಂದು ವರದಿ ನೀಡಿದ ನಂತರ, ಪೊಲೀಸರು ಪ್ರಕರಣದ ಪರಿಸಮಾಪ್ತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT