ನವದೆಹಲಿ (ಪಿಟಿಐ): ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ರಕ್ಷಣಾ ವೆಚ್ಚವನ್ನು ಶೇ17ರಷ್ಟು ಏರಿಸಲಾಗಿದೆ. ಭಾರತೀಯ ವಾಯು ಪಡೆಗೆ ಹೊಸ 126 ಯುದ್ಧವಿಮಾನಗಳ ಸೇರ್ಪಡೆ ಸೇರಿದಂತೆ ಹಲವು ರಕ್ಷಣಾ ಒಪ್ಪಂದಗಳಿಗಾಗಿ ಈ ವರ್ಷ ಒಟ್ಟು 1,93,407 ಕೋಟಿ ರೂಪಾಯಿ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಕಳೆದ ವರ್ಷದ ಬಜೆಟ್‌ನಲ್ಲಿ ರಕ್ಷಣಾ ವೆಚ್ಚಗಳಿಗಾಗಿ 1,64,415 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿತ್ತು.
ದೇಶದ ಭದ್ರತೆಗಾಗಿ ಪ್ರಸ್ತುತದ ಅವಶ್ಯಕತೆಗಳು ಮತ್ತು ಭವಿಷ್ಯದ ಅಗತ್ಯತೆಗಳನ್ನು ಗಮನದಲ್ಲಿರಿಸಿಕೊಂಡು ಇಷ್ಟು ಹಣವನ್ನು ಮೀಸಲಿಡಲಾಗಿದೆ ಎಂದು ಪ್ರಣವ್ ಮುಖರ್ಜಿ ಹೇಳಿದ್ದಾರೆ. 126 ಮಧ್ಯಮ ಬಹು ಪಾತ್ರದ ಯುದ್ಧವಿಮಾನಗಳ (ಎಂಎಂಆರ್‌ಸಿಎ) ಖರೀದಿ, 145 ಅತ್ಯಾಧುನಿಕ ಹಗುರ ಬಂದೂಕು (ಯುಎಲ್‌ಎಚ್), 197 ಹಗುರ ಬಹುಪಯೋಗಿ ಹೆಲಿಕಾಪ್ಟರ್ ಮತ್ತು ಇತರ ಶಸ್ತ್ರಾಸ್ತ್ರಗಳ ಖರೀದಿ ಒಪ್ಪಂದಗಳಿಗೆ ಭಾರತ ಈ ವರ್ಷ ಸಹಿ ಹಾಕುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.