ADVERTISEMENT

ರಷ್ಯದ ಉದ್ಯಮ ರೂಪುರೇಷೆಗೆ ಭಾರತ ತಗಾದೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2011, 19:30 IST
Last Updated 23 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಉದ್ದೇಶಿತ ಭಾರತ ಮತ್ತು ರಷ್ಯ ಸಹಭಾಗಿತ್ವದ ಬಹುಪಯೋಗಿ ವಿಮಾನ ತಯಾರಿಕಾ ಯೋಜನೆಗೆ ಆರಂಭದಲ್ಲಿಯೇ ಅಡ್ಡಿ ಉಂಟಾಗಿದೆ. ಯೋಜನೆಗೆ ಸಂಬಂಧಿಸಿದಂತೆ ಮಾಸ್ಕೊ ರೂಪಿಸಿರುವ ಉದ್ಯಮ ರೂಪುರೇಷೆಗೆ ಭಾರತ ಸರ್ಕಾರ ತಗಾದೆ ತೆಗೆದಿರುವುದೇ ಇದಕ್ಕೆ ಪ್ರಮುಖ ಕಾರಣ.

ಯೋಜನೆಯ ಬಗ್ಗೆ ರಷ್ಯ ಸಲ್ಲಿಸಿರುವ ಉದ್ಯಮ ರೂಪುರೇಷೆಯಿಂದ ಎಂಜಿನಿಯರ್‌ಗಳು ಮತ್ತು ವಿಜ್ಞಾನಿಗಳು ಉದ್ದೇಶಿತ ವಿಮಾನ ಅಭಿವೃದ್ಧಿ ಪಡಿಸಲು ಆಗುವುದಿಲ್ಲ ಎಂಬ ಕಾರಣಕ್ಕೆ ಭಾರತಕ್ಕೆ ತೃಪ್ತಿ ತಂದಿಲ್ಲ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಸಭೆ ಸೇರುವ ಬಗ್ಗೆ ಎರಡು ದೇಶಗಳು ಯಾವುದೇ ನಿರ್ಣಯಕ್ಕೆ ಬಂದಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.