ನವದೆಹಲಿ (ಪಿಟಿಐ): ರಾಜಧಾನಿ ನಗರ ದೆಹಲಿಯಲ್ಲಿ ಭಾನುವಾರ ಬಣ್ಣಗಳ ಹಬ್ಬ ಹೋಳಿಯದ್ದೇ ಸಡಗರ. ಎಲ್ಲಾ ವಯೋಮಾನದ ಜನರು ರಸ್ತೆಗಳಲ್ಲಿ ಒಂದೆಡೆ ಸೇರಿ ಬಣ್ಣಗಳನ್ನು ಎರಚಿ ಸಂಭ್ರಮಿಸಿದರು.
ವೃಂದಾವನದಲ್ಲಿ ವಿಧವೆಯರು ಹೋಳಿ ಹಬ್ಬವನ್ನು ಗುಲಾಬಿ ಎಲೆಗಳು ಹಾಗೂ ಬಣ್ಣಗಳನ್ನು ಎರಚಿ, ಸಿಹಿ ಹಂಚಿ, ನೃತ್ಯ ಮಾಡುವ ಮೂಲಕ ವಿಶೇಷವಾಗಿ ಆಚರಿಸಿದರು.
ಬಾಲಿವುಡ್ ಅಂಗಳದಲ್ಲಿ ಹೋಳಿ ಸಂಭ್ರಮ: ಬಾಲಿವುಡ್ ಅಂಗಳದಲ್ಲೂ ಬಣ್ಣಗಳ ಹಬ್ಬ ಹೋಳಿಯ ಶುಭಾಶಯಗಳು ಹರಿದಾಡಿವೆ. ಬಾಲಿವುಡ್ ನಟ, ನಟಿಯರು ತಮ್ಮ ಪ್ರೀತಿಯ ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಟ್ವೀಟ್ ಮಾಡಿ ಹೋಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
‘ಹೋಳಿ ಹಬ್ಬ ನಿಮಗೆಲ್ಲಾ ಸಂತಸ ತರಲಿ’ ಎಂದು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಟ್ವೀಟ್ ಮಾಡಿದ್ದಾರೆ.
‘ಕಳೆದ ಕೆಲವು ವರ್ಷಗಳ ಹಿಂದಿನ ಕೆಟ್ಟ ಕ್ಷಣಗಳಿಂದಾಗಿ ನಾನು ಸಂಭ್ರಮಾಚರಣೆಯಲ್ಲಿ ಭಾಗವಹಿಸುವುದಿಲ್ಲ. ಆದರೆ ಮಗಳು ಶ್ವೇತಾ ಹುಟ್ಟುಹಬ್ಬ ಇರುವ ಕಾರಣ ಅವಳ ಜೊತೆ ಸಮಯ ಕಳೆಯುತ್ತೇನೆ‘ ಎಂದು ಅಮಿತಾಭ್ ಹೇಳಿದ್ದಾರೆ.
ನಟಿಯರಾದ ಶ್ರುತಿ ಹಾಸನ್, ಮಲ್ಲಿಕಾ ಶೆರಾವತ್ ಅವರೂ ಶುಭಾಶಯ ಟ್ವೀಟ್ ಮಾಡಿದ್ದಾರೆ. ಮೂವರ ಸಾವು: ಹೋಳಿ ಆಚರಣೆ ವೇಳೆ ರಾಜಸ್ತಾನದ ಬನ್‌್ಸವಾರಾ ಜಿಲ್ಲೆಯ ಮಾಹಿ ಕಾಲುವೆಯಲ್ಲಿ ಮುಳುಗಿ ಮೂವರು ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.