ADVERTISEMENT

ರಾಜಾ ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 19:30 IST
Last Updated 3 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): 2ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಂಧಿಸಿರುವ ದೂರ ಸಂಪರ್ಕ ಖಾತೆ ಮಾಜಿ ಸಚಿವ ಎ.ರಾಜಾ ಸೇರಿದಂತೆ ಐವರ ಜಾಮೀನು ಅರ್ಜಿಗಳ ವಿಚಾರಣೆಯನ್ನು ಇಲ್ಲಿನ ನ್ಯಾಯಾಲಯ ಮುಂದೂಡಿದೆ.

ಆರೋಪಿಗಳ ವಿರುದ್ಧ ಆರೋಪ ಸಿದ್ಧಪಡಿಸುವ ಬಗ್ಗೆ ನ್ಯಾಯಾಲಯ ನೀಡುವ ಆದೇಶದ ವರೆಗೆ ವಿಚಾರಣೆಯನ್ನು ಮುಂದೂಡಲಾಯಿತು.

ರಾಜಾ ಅವರ ಖಾಸಗಿ ಕಾರ್ಯದರ್ಶಿ ಆರ್.ಕೆ.ಚಂದೂಲಿಯಾ, ಸ್ವಾನ್ ಟೆಲಿಕಾಂ ಸಂಸ್ಥೆಯ ಪ್ರವರ್ತಕ ಶಾಹಿದ್ ಉಸ್ಮಾನ್ ಬಲ್ವ ಅವರೂ ಬಂಧಿತರಲ್ಲಿ ಸೇರಿದ್ದಾರೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಒ.ಪಿ.ಸೈನಿ ಅವರು ಪ್ರಕರಣದ ವಿಚಾರಣೆಯನ್ನು17ರ ವರೆಗೆ ಮುಂದೂಡಿದರು.
 
ಅಂದು ಕುಸೆಗಾನ್ ಫ್ರೂಟ್ಸ್ ಅಂಡ್ ವೆಜೆಟೆಬಲ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾದ ಆಸಿಫ್ ಬಲ್ವ ಮತ್ತು ರಾಜೀವ್ ಅಗರವಾಲ್, ಸಿನಿಯುಗ್ ಫಿಲಂಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಕರೀಮ್ ಮೊರಾನಿ ಅವರ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.