ನವದೆಹಲಿ (ಪಿಟಿಐ): ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರ ಬಲ ಕಾಲಿನ ಮೂಳೆ ಮುರಿದಿದ್ದು, ಇದರಿಂದಾಗಿ ಸೋಮವಾರ ಸಂಸತ್‌ನಲ್ಲಿ ನಡೆದ ಬಜೆಟ್ ಮಂಡನೆ ಕಲಾಪಕ್ಕೆ ಹಾಜರಾಗಲು ಅವರಿಗೆ ಸಾಧ್ಯವಾಗಿರಲಿಲ್ಲ. ಗುಣವಾಗಲು ಸ್ವಲ್ಪ ಸಮಯ ಹಿಡಿಯಲಿದೆ. ಅಲ್ಲಿಯವರೆಗೂ ರಾಹುಲ್ ಗಾಂಧಿ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಸತ್‌ನಲ್ಲಿ ನಡೆಯುವ ಎಲ್ಲ ಪ್ರಮುಖ ಕಲಾಪಗಳಿಗೆ ಹಾಜರಾಗುವ ರಾಹುಲ್ ಗಾಂಧಿ ಅವರು ಸೋಮವಾರ ಬಜೆಟ್ ಕಲಾಪಕ್ಕೆ ಗೈರು ಹಾಜರಾಗಿದ್ದನ್ನು ಹಲವರು ಗುರುತಿಸಿದ್ದರು.ಕಾಲಿನ ಎಲುಬಿಗೆ ಹಾನಿಯಾಗಿದ್ದರೂ ಶುಕ್ರವಾರ ರೈಲ್ವೆ ಬಜೆಟ್ ಕಲಾಪದಲ್ಲಿ ರಾಹುಲ್ ಭಾಗವಹಿಸಿದ್ದರು. ಆದರೆ ನಡೆಯುತ್ತಿದ್ದಾಗ ಅವರು ಕುಂಟುತ್ತಿದ್ದರು. ನಂತರ ಎಕ್ಸ್- ರೇ ತೆಗೆಸಿದಾಗ ಕಾಲಿನ ಎಲುಬು ಮುರಿದಿರುವುದು ಪತ್ತೆಯಾಗಿತ್ತು. ಅವರು ಕೆಲವು ದಿನಗಳ ಹಿಂದೆ ವ್ಯಾಯಾಮ ಮಾಡುತ್ತಿದ್ದಾಗ ಗಾಯಗೊಂಡಿದ್ದರು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.