ADVERTISEMENT

ರಾಹುಲ್ ಗಾಂಧಿಯನ್ನು ರಹಸ್ಯವಾಗಿ ಭೇಟಿ ಮಾಡಿದ್ದಾರಾ ಹಾರ್ದಿಕ್, ಕಾಂಗ್ರೆಸ್ ಜತೆ ಕೈಜೋಡಿಸ್ತಾರಾ?

ಅನುಮಾನಕ್ಕೆ ಇಂಬು ನೀಡಿದ ಸಿಸಿಟಿವಿ ದೃಶ್ಯಾವಳಿ

ಏಜೆನ್ಸೀಸ್
Published 24 ಅಕ್ಟೋಬರ್ 2017, 10:27 IST
Last Updated 24 ಅಕ್ಟೋಬರ್ 2017, 10:27 IST
ರಾಹುಲ್ ಗಾಂಧಿಯನ್ನು ರಹಸ್ಯವಾಗಿ ಭೇಟಿ ಮಾಡಿದ್ದಾರಾ ಹಾರ್ದಿಕ್,  ಕಾಂಗ್ರೆಸ್ ಜತೆ ಕೈಜೋಡಿಸ್ತಾರಾ?
ರಾಹುಲ್ ಗಾಂಧಿಯನ್ನು ರಹಸ್ಯವಾಗಿ ಭೇಟಿ ಮಾಡಿದ್ದಾರಾ ಹಾರ್ದಿಕ್, ಕಾಂಗ್ರೆಸ್ ಜತೆ ಕೈಜೋಡಿಸ್ತಾರಾ?   

ಗಾಂಧಿನಗರ: ಪಾಟಿದಾರ ಅನಾಮತ್‌ ಆಂದೋಲನ ಸಮಿತಿ ಸಂಚಾಲಕ ಹಾರ್ದಿಕ್ ಪಟೇಲ್ ಅವರು ಅಹಮದಾಬಾದಿನ ಖಾಸಗಿ ಹೋಟೆಲ್‌ವೊಂದರಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ರಹಸ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂಬ ಸಂಶಯಗಳು ಹುಟ್ಟಿಕೊಂಡಿರುವಾಗಲೇ, ಇದಕ್ಕೆ ಇಂಬು ನೀಡುವಂತೆ ಹಾರ್ದಿಕ್ ಅವರು ಹೋಟೆಲ್‌ವೊಂದರ ಒಳಗೆ ಹೋಗುತ್ತಿರುವ ಹಾಗೂ ಹೊರಬರುತ್ತಿರುವ ದೃಶ್ಯಾವಳಿಗಳು ಮಾಧ್ಯಮಗಳಿಗೆ ಲಭ್ಯವಾಗಿವೆ.

ಸುಮಾರು 40 ನಿಮಿಷಗಳ ಕಾಲ ಮಾತುಕತೆ ನಡೆದಿದ್ದು, ಹಾರ್ದಿಕ್ ಪಟೇಲ್ ಅವರು ಕಾಂಗ್ರೆಸ್ ಪಕ್ಷದ ಜತೆ ಕೈಜೋಡಿಸುತ್ತಾರಾ? ಎಂಬ ಅನುಮಾನಗಳು ರಾಜಕೀಯ ವಲಯದಲ್ಲಿ ವ್ಯಕ್ತವಾಗಿವೆ.

ಲಭ್ಯವಿರುವ ದೃಶ್ಯಾವಳಿಯಲ್ಲಿ ಹಾರ್ದಿಕ್ ಅವರು ಭಾನುವಾರ ರಾತ್ರಿ ಸುಮಾರು 11.53ಕ್ಕೆ ಮೂವರ ಜತೆಯಲ್ಲಿ ಹೋಟೆಲ್‌ ಒಳಗೆ ಹೋಗಿರುವುದು ಹಾಗೂ 12.22ಕ್ಕೆ ಹೊರಬಂದಿರುವುದು ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.