ADVERTISEMENT

ರೈಲು ಪ್ರಯಾಣಿಕರ ನೆರವಿಗೆ ಸೇವಾಧಿಕಾರಿ!

ಪಿಟಿಐ
Published 4 ಮಾರ್ಚ್ 2018, 19:30 IST
Last Updated 4 ಮಾರ್ಚ್ 2018, 19:30 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ನವದೆಹಲಿ: ರೈಲುಗಳಲ್ಲಿ ಪ್ರಯಾಣಿಕರ ದೂರುಗಳ ಪರಿಹಾರಕ್ಕಾಗಿ ಸದ್ಯದಲ್ಲೇ ಸೇವಾಧಿಕಾರಿಯನ್ನು ನೇಮಿಸುವ ಸಾಧ್ಯತೆ ಇದೆ. ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಗಳ ಸಮಿತಿ ಈ ಬಗ್ಗೆ ಶಿಫಾರಸು ಮಾಡಿದ್ದು, ಇದಕ್ಕೆ ರೈಲ್ವೆ ಮಂಡಳಿ ಅನುಮೋದನೆ ನೀಡಬೇಕಿದೆ.

ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಅವರು ಕಳೆದ ಡಿಸೆಂಬರ್‌ನಲ್ಲಿ ವಲಯ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಸಮಿತಿ ರಚಿಸಿದ್ದರು. ಸಮಿತಿಯು ಪ್ರಯಾಣಿಕರ ದೂರುಗಳ ಪರಿಹಾರಕ್ಕೆ ಸೇವಾಧಿಕಾರಿ ನೇಮಕ ಸೇರಿದಂತೆ ಹಲವು ಶಿಫಾರಸುಗಳನ್ನು ಮಾಡಿದೆ.

ಎಲ್ಲ ಪ್ಯಾಸೆಂಜರ್‌ ಮತ್ತು ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಸೇವಾಧಿಕಾರಿ ನೇಮಕಾತಿಗೆ ಸಂಬಂಧಿಸಿದಂತೆ ಆಯಾ ವಲಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸಮಿತಿಯು ವರದಿಯಲ್ಲಿ ತಿಳಿಸಿದೆ.

ADVERTISEMENT

ಜೂನಿಯರ್‌ ಎಂಜಿನಿಯರ್‌ ಹಂತದ ಉದ್ಯೋಗಿಗಳನ್ನು ಕನಿಷ್ಠ ಎರಡು ವರ್ಷಗಳ ಅವಧಿಗೆ ಸೇವಾಧಿಕಾರಿಯಾಗಿ ನೇಮಿಸಬೇಕು. ಇವರು ರೈಲಿನ ಸ್ವಚ್ಛತೆ, ದುರಸ್ತಿ, ಪ್ರಯಾಣಿಕರ ವಸ್ತುಗಳ ಕಳವು, ಆಸನಗಳ ಸಮಸ್ಯೆ, ಕಿಟಕಿ, ಬಾಗಿಲು, ಕ್ರಿಮಿಕೀಟಗಳ ನಿಯಂತ್ರಣ ಇತ್ಯಾದಿ ಬಗ್ಗೆ ಗಮನ ಹರಿಸಬೇಕು. ನಿಗದಿತ ಸಮವಸ್ತ್ರದಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಅಗತ್ಯ ಉಪಕರಣಗಳನ್ನು ಒಳಗೊಂಡ ಕಿಟ್‌ ಅನ್ನು ಅವರಿಗೆ ನೀಡಬೇಕು ಎಂದು ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.