ADVERTISEMENT

ಲಂಚ: ವಿಂಗ್ ಕಮಾಂಡರ್ ವಜಾ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 19:59 IST
Last Updated 16 ಜುಲೈ 2013, 19:59 IST

ನವದೆಹಲಿ (ಪಿಟಿಐ): ಫ್ರೆಂಚ್ ಅಧಿಕಾರಿಯೊಬ್ಬರ ಬಳಿ ಲಂಚ ಕೇಳಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಿಂಗ್ ಕಮಾಂಡರ್ ಒಬ್ಬರನ್ನು ಭಾರತೀಯ ವಾಯುಪಡೆ ಮಂಗಳವಾರ ಕೆಲಸದಿಂದ ವಜಾ ಮಾಡಿದೆ.

ವಿಂಗ್ ಕಮಾಂಡರ್ ಎ.ಕೆ. ಠಾಕೂರ್ ವಜಾಗೊಂಡ ಐಎಎಫ್ ಅಧಿಕಾರಿ. ಪ್ರಕರಣ ಕುರಿತು ವಿಚಾರಣೆ ನಡೆಸಿದ್ದ ಇಲ್ಲಿನ ಜನರಲ್ ಕೋರ್ಟ್ ಮಾರ್ಷಲ್ ಠಾಕೂರ್ ತಪ್ಪಿತಸ್ಥ ಎಂದು ಹೇಳಿತ್ತು.

2011ರಂದು ಬೆಂಗಳೂರಿನಲ್ಲಿ ನಡೆದಿದ್ದ `ಏರ್ ಇಂಡಿಯಾ ಷೋ'ನಲ್ಲಿ ಭಾಗವಹಿಸಿದ್ದ ಫ್ರೆಂಚ್ ರಕ್ಷಣಾ ಕಂಪೆನಿ `ಡಸಾಲ್ಟ್ ಏವಿಯೇಷನ್'ನ ವಿಮಾನವನ್ನು, ಏರ್ ಷೋನಲ್ಲಿ ಪ್ರದರ್ಶನಕ್ಕಿಡಲು ಹೆಚ್ಚಿನ ಅನುಕೂಲ ಕಲ್ಪಿಸುವುದಕ್ಕಾಗಿ  ಠಾಕೂರ್, ಕಂಪೆನಿಯ ಅಧಿಕಾರಿಗಳ ಬಳಿ ್ಙ 20 ಸಾವಿರ ಲಂಚ ಕೇಳಿದ್ದರು ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಅಧಿಕಾರಿ ವಿರುದ್ಧ ದೂರು ನೀಡಿದ್ದ ಫ್ರೆಂಚ್ ಕಂಪೆನಿಯ ಅಧಿಕಾರಿಗಳು, ಕೋರ್ಟ್‌ಗೆ ಹಾಜರಾಗಿ ಸಾಕ್ಷಿ ನುಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.