ADVERTISEMENT

ಲಿಬಿಯಾ ವಾಯು ದಾಳಿ: 48 ಸಾವು, ಭಾರತದ ಕಳವಳ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2011, 10:50 IST
Last Updated 20 ಮಾರ್ಚ್ 2011, 10:50 IST

 ನವದೆಹಲಿ, (ಪಿಟಿಐ): ಲಿಬಿಯಾದಲ್ಲಿ ನಡೆಯುತ್ತಿರುವ ಪ್ರಭುತ್ವ ವಿರೋಧಿ ಮತ್ತು ಪರ ಹೋರಾಟದಲ್ಲಿ ಹೆಚ್ಚುತ್ತಿರುವ ಹಿಂಸಾಚಾರಗಳ ಬಗ್ಗೆ ಭಾನುವಾರ ಕಳವಳ ವ್ಯಕ್ತಪಡಿಸಿರುವ ಭಾರತ, ಅಮೆರಿಕ ಮತ್ತು ಅದರ ಬೆಂಬಲಿತ ದೇಶಗಳು ಲಿಬಿಯಾದ ಮೇಲೆ ವಾಯುದಾಳಿ ನಡೆಸಿರುವುದಕ್ಕೆ ತನ್ನ ವಿಷಾದ ವ್ಯಕ್ತಪಡಿಸಿದೆ.

 ಶಾಂತಿ ಮಾರ್ಗದ ಮೂಲಕವೇ ಲಿಬಿಯಾದಲ್ಲಿನ ಜನತೆ ತಮ್ಮ ಭಿನ್ನಾಭಿಪ್ರಾಯಗಳನ್ನು ತಾವೇ ಬಗೆಹರಿಸಕೊಳ್ಳಬೇಕು ಎಂದು ಅದು ಆಗ್ರಹಿಸಿದೆ.

ವಾಯು ದಾಳಿಗಳಲ್ಲಿ ಲಿಬಿಯಾದ ಅಮಾಯಕ ಜನರು, ಅಲ್ಲಿರುವ ವಿದೇಶಿ ಪ್ರಜೆಗಳು ಮತ್ತು ರಾಯಭಾರ ಸಿಬ್ಬಂದಿಗಳಿಗೆ ತೊಂದರೆಯಾಗದಿರಲಿ ಎಂದು ಹಾರೈಸಿರುವ ಭಾರತ, ವಿಶ್ವಸಂಸ್ಥೆ ಮತ್ತು ಆ ಪ್ರದೇಶದಲ್ಲಿ ಸಕ್ರಿಯವಾಗಿರುವ ಸಂಘ ಸಂಸ್ಥೆಗಳು ಆಸಕ್ತಿ  ತಳೆದು ಚರ್ಚೆ ಮತ್ತು ಮಾತುಕತೆಗಳ ಮೂಲಕ ಅಲ್ಲಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಸಹಕರಿಸಲಿ ಎಂದು ಹೇಳಿದೆ.

ಬೆಂಘಝಿ ವರದಿ (ಎಪಿ): ಅಮೆರಿಕ ಮತ್ತು ಇತರ ಯುರೋಪಿನ ದೇಶಗಳು ಮುಅಮ್ಮುರ ಗಡಾಫಿ ಅವರ ಸೇನೆ ಮತ್ತು ವಾಯು ನೆಲೆಗಳನ್ನು ಗುರಿಯಾಗಿರಿಸಿ ವಾಯು ದಾಳಿ ನಡೆಸಿವೆ. ಈ ದಾಳಿಗಳಲ್ಲಿ  ಇದುವರೆಗೆ 48 ಮಂದಿ ಸತ್ತಿದ್ದಾರೆ 150 ಮಂದಿ ಗಾಯಗೊಂಡಿದ್ದಾರೆ ಎಂದು ಲಿಬಿಯಾದ ಟಿವಿ ವರದಿ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.