ADVERTISEMENT

ಲೇಹ್‌ನಲ್ಲಿ ವಾಯುನಿಯಂತ್ರಿತ ರೈಲ್ವೆ ಬೋಗಿ

ಪಿಟಿಐ
Published 1 ನವೆಂಬರ್ 2018, 20:00 IST
Last Updated 1 ನವೆಂಬರ್ 2018, 20:00 IST
ಲೇಹ್‌
ಲೇಹ್‌   

ಭಾರತ–ಚೀನಾ ಗಡಿಯಲ್ಲಿರುವ ಜಗತ್ತಿನ ಅತಿ ಎತ್ತರದ ರೈಲ್ವೆ ಮಾರ್ಗದಲ್ಲಿಗಾಳಿಯ ಒತ್ತಡವನ್ನು ನಿಯಂತ್ರಿಸುವ ಸಾಮರ್ಥ್ಯದಬೋಗಿಗಳ ರೈಲು ಓಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಚೀನಾದ ಕ್ವಿಂಗ್‌ಹೇ–ಟಿಬೆಟ್ ಮಾರ್ಗದಲ್ಲಿ ಇಂತಹ ಬೋಗಿಗಳನ್ನು ಈಗಾಗಲೇ ಬಳಸಲಾಗುತ್ತಿದೆ.

ಯಾವ ಮಾರ್ಗ?

ಬಿಲಾಸ್‌ಪುರ–ಮನಾಲಿ–ಲೇಹ್

ADVERTISEMENT

ಸಂಪರ್ಕ ಎಲ್ಲೆಲ್ಲಿ?:

ಬಿಲಾಸ್‌ಪುರ, ಮನಾಲಿ, ಲೇಹ್, ಸುಂದರ್‌ನಗರ, ಮಂಡಿ, ಕೆಲಾಂಗ್, ಕೊಕ್ಸರ್, ದಾರ್ಚ್, ಉಪ್ಸಿ ಹಾಗೂ ಹಿಮಾಚಲ ಪ್ರದೇಶ ಮತ್ತು ಜಮ್ಮು–ಕಾಶ್ಮೀರದ ಕೆಲವು ನಗರಗಳನ್ನೂ ಈ ಮಾರ್ಗ ಸಂಪರ್ಕಿಸುತ್ತದೆ

ಅಂಕಿ–ಅಂಶ

5360 ಮೀಟರ್

ಸಮುದ್ರಮಟ್ಟದಿಂದ ಲೇಹ್ ಇರುವ ಎತ್ತರ

465 ಕಿ.ಮೀ

ರೈಲ್ವೆ ಮಾರ್ಗದ ಉದ್ದ

₹53,360

ರೈಲ್ವೆ ಮಾರ್ಗ ಯೋಜನೆಯ ವೆಚ್ಚ

ಲೇಹ್‌ನಲ್ಲಿ ಏಕೆ?

ಸಮುದ್ರದ ಮಟ್ಟದಿಂದ ಅತಿ ಎತ್ತರದಲ್ಲಿರುವ ಲೇಹ್‌ನಲ್ಲಿ ಗಾಳಿಯ ಪ್ರಮಾಣ ಕಡಿಮೆ ಇದೆ. ಹೀಗಾಗಿ ಗಾಳಿಯ ಒತ್ತಡವನ್ನು ಕೃತಕವನ್ನು ನಿಯಂತ್ರಿಸುವ ಬೋಗಿಗಳನ್ನು ತಯಾರಿಸಲಾಗುತ್ತಿದೆ.

ವಿಮಾನಗಳಲ್ಲಿ ಈ ವ್ಯವಸ್ಥೆ ಇದೆ

ಎಲ್ಲ ವಿಮಾನಗಳಲ್ಲೂ ಈ ತಂತ್ರಜ್ಞಾನ ಇದೆ. ಆಗಸದಲ್ಲಿ ಗಾಳಿಯ ಒತ್ತಡವನ್ನು ತಾಳಿಕೊಳ್ಳುವಂತೆ ವಿಮಾನ ಒಳಭಾಗವನ್ನು ತಯಾರಿಸಲಾಗಿರುತ್ತದೆ. ಸಮುದ್ರಮಟ್ಟದಲ್ಲಿ ಇರುವ ಗಾಳಿಯ ಒತ್ತಡವನ್ನು ಇಲ್ಲಿ ಸೃಷ್ಟಿಸಲಾಗುತ್ತದೆ. ಹೀಗಾಗಿ ಪ್ರಯಾಣಿಕರ ಉಸಿರಾಟಕ್ಕೆ ತೊಂದರೆಯಾಗುವುದಿಲ್ಲ.

ಉಪಯೋಗ ಮತ್ತು ಕಾರ್ಯಾಚರಣೆ

ಎತ್ತರದ ಜಾಗದಲ್ಲಿ ಪ್ರಯಾಣಿಕರಿಗೆ ಉಸಿರಾಟದ ಸಮಸ್ಯೆ ಎದುರಾಗುವುದಿಲ್ಲ

ಬೋಗಿಯ ಒಳಗಡೆ ಆಮ್ಲಜನಕದ ಪ್ರಮಾಣ ಸಮಸ್ಥಿತಿಯಲ್ಲಿರುವಂತೆ ಕಾಯ್ದುಕೊಳ್ಳಲಾಗುತ್ತದೆ

ಆಮ್ಲಜನಕ ಪೂರೈಸಲು ಎರಡು ರೀತಿಯ ವ್ಯವಸ್ಥೆ ಇರಲಿವೆ

ಚೀನಾದ ರೈಲ್ವೆ ಬೋಗಿಗಳನ್ನು ಕೆನಡಾದ ಬೊಂಬಾರ್ಡಿಯರ್ ಕಂಪನಿ ತಯಾರಿಸಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.