ADVERTISEMENT

‘ಲೈಂಗಿಕ ಶಿಕ್ಷಣದಿಂದ ಅಪರಾಧ ನಿಯಂತ್ರಣ’

ಪಿಟಿಐ
Published 10 ಜೂನ್ 2018, 19:10 IST
Last Updated 10 ಜೂನ್ 2018, 19:10 IST

ನವದೆಹಲಿ: ಶಾಲೆಯ ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣ ಸೇರಿಸುವುದರಿಂದ, ಮಕ್ಕಳು ಲಿಂಗ ಸಂಬಂಧಿ ಸೂಕ್ಷ್ಮ ಸಂವೇದನೆಗಳನ್ನು ಅರಿಯಲು ಸಾಧ್ಯವಾಗುತ್ತದೆ; ಲೈಂಗಿಕ ದೌರ್ಜನ್ಯಗಳನ್ನು ನಿಯಂತ್ರಿಸಲು ನೆರವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಲೈಂಗಿಕ ದೌರ್ಜನ್ಯ ಎಂದರೇನು ಎಂಬ ಅರಿವು ಮಕ್ಕಳಲ್ಲಿ ಇದ್ದರೆ, ಹಲವು ಸಂದರ್ಭಗಳಲ್ಲಿ ಅದು ಸಹಾಯಕ್ಕೆ ಬರುತ್ತದೆ. ತಮ್ಮ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವುದು ಮಾತ್ರವಲ್ಲ, ತಾವು ಸಹ ಅಂತಹ ದೌರ್ಜನ್ಯ ಎಸಗುವುದು ತಪ್ಪು ಎಂಬ ಭಾವನೆ ಮನಸ್ಸಿನಲ್ಲಿ ಮೂಡುತ್ತದೆ’ ಎಂದು ‘ಮಕ್ಕಳ ಹಕ್ಕುಗಳು ಮತ್ತು ನೀವು’ ಸಂಸ್ಥೆಯ ಸಿಇಒ ಪೂಜಾ ಮರ್ವಾ ಹೇಳಿದ್ದಾರೆ.

‘10 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಈ ಶಿಕ್ಷಣ ನೀಡುವುದು ಸರಿ. ಮಕ್ಕಳ ಮನೋಶಕ್ತಿ ವೃದ್ಧಿಯಾಗುವ ವಯಸ್ಸು ಅದು’ ಎಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ನಂದಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.