ADVERTISEMENT

ಲೋಕಸಭೆ: ಐವರಿಗೆ ಶೇ 100 ಹಾಜರಾತಿ

ಪಿಟಿಐ
Published 4 ಜೂನ್ 2017, 19:37 IST
Last Updated 4 ಜೂನ್ 2017, 19:37 IST
ಲೋಕಸಭೆ: ಐವರಿಗೆ ಶೇ 100 ಹಾಜರಾತಿ
ಲೋಕಸಭೆ: ಐವರಿಗೆ ಶೇ 100 ಹಾಜರಾತಿ   

ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಲೋಕಸಭೆ ಕಲಾಪದಲ್ಲಿ ಶೇಕಡಾ ನೂರರಷ್ಟು ಹಾಜರಾತಿ ಇರುವವರು ಐವರು ಸಂಸದರು ಮಾತ್ರ ಎಂದು ಪಿಆರ್‌ಎಸ್‌ ಸಂಶೋಧನಾ ಸಂಸ್ಥೆ ಹೇಳಿದೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ (ಶೇ 59) ಅವರು ಉಪಾಧ್ಯಕ್ಷ ರಾಹುಲ್‌ ಗಾಂಧಿ (ಶೇ 54) ಅವರಿಗಿಂತ ಹೆಚ್ಚಿನ ಹಾಜರಿ ಹೊಂದಿದ್ದಾರೆ. ಎಸ್‌ಪಿಯ ಹಿರಿಯ ಮುಖಂಡ ಮುಲಾಯಂ ಸಿಂಗ್‌ ಯಾದವ್ ಶೇ 79ರಷ್ಟು ಹಾಜರಾತಿ ಹೊಂದಿದ್ದಾರೆ. ಆದರೆ ಅವರ ಸೊಸೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಹೆಂಡತಿ ಡಿಂಪಲ್‌ ಯಾದವ್‌ ಶೇ 35ರಷ್ಟು ಹಾಜರಾತಿ ಹೊಂದಿದ್ದಾರೆ.

22 ಸಂಸದರು ಶೇ 50ಕ್ಕಿಂತ ಕಡಿಮೆ ಹಾಜರಾತಿ ಹೊಂದಿದ್ದಾರೆ. ಪ್ರಧಾನಿ ಮತ್ತು ಸಚಿವರು ಹಾಜರಾತಿ ಪುಸ್ತಕಕ್ಕೆ ಸಹಿ ಹಾಕುವುದು ಕಡ್ಡಾಯವಲ್ಲ. ಹಾಗಾಗಿ ಅವರ ಹಾಜರಾತಿ ಮಾಹಿತಿ ಲಭ್ಯವಿಲ್ಲ. ವಿರೋಧ ಪಕ್ಷದ ನಾಯಕರಿಗೂ ಈ ವಿನಾಯಿತಿ ಇದೆ.

ADVERTISEMENT

ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗುವ ಮೊದಲು ಮೆಹಬೂಬಾ ಮುಫ್ತಿ ಅವರು ಸಂಸದರಾಗಿದ್ದರು. ಆದರೆ ಈ ಅವಧಿಯಲ್ಲಿ ಅವರು ಶೇ 35ರಷ್ಟು ಕಲಾಪಗಳಿಗೆ ಮಾತ್ರ ಹಾಜರಾಗಿದ್ದರು.

* 133ಸಂಸದರು ಶೇ 90ಕ್ಕಿಂತ ಹೆಚ್ಚು ಹಾಜರಾತಿ ಹೊಂದಿದ್ದಾರೆ.
*80% ಸಂಸದರ ಸರಾಸರಿ ಹಾಜರಾತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.