ADVERTISEMENT

ವಂಚಕ ಕಂಪನಿಗಳ ಸ್ವತ್ತು ಮಾರಾಟ ನಿಷೇಧ

ಪಿಟಿಐ
Published 4 ಮಾರ್ಚ್ 2018, 19:30 IST
Last Updated 4 ಮಾರ್ಚ್ 2018, 19:30 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ ವಂಚನೆ ಪ್ರಕರಣದಲ್ಲಿ ವಜ್ರ ವ್ಯಾಪಾರಿಗಳಾದ ನೀರವ್ ಮೋದಿ, ಮೆಹುಲ್ ಚೋಕ್ಸಿ ಸೇರಿ ಹಗರಣದ ಎಲ್ಲಾ ಆರೋಪಿಗಳಿಗೆ ಸೇರಿದ 64 ಕಂಪನಿಗಳ ಸ್ವತ್ತುಗಳ ಮಾರಾಟಕ್ಕೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ನಿಷೇಧ ಹೇರಿದೆ.

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಎನ್‌ಸಿಎಲ್‌ಟಿ ಈ ಆದೇಶ ಹೊರಡಿಸಿದೆ. ಆರೋಪಿಗಳ ಒಡೆತನದ ಕಂಪನಿಗಳು, ಪಾಲುದಾರ ಕಂಪನಿಗಳು ಮತ್ತು ಆ ಕಂಪನಿಗಳ ಜತೆ ವ್ಯವಹರಿಸುವ ಸೀಮಿತ ಹೊಣೆಗಾರಿಕೆ ಪಾಲುದಾರ ಸಂಸ್ಥೆಗಳ ಸ್ವತ್ತುಗಳನ್ನು ವರ್ಗಾಯಿಸುವಂತಿಲ್ಲ ಮತ್ತು ಮಾರಾಟ ಮಾಡುವಂತಿಲ್ಲ ಎಂದು ನ್ಯಾಯಮಂಡಳಿ ತಿಳಿಸಿದೆ. ನೀರವ್, ಚೋಕ್ಸಿ ಮತ್ತು ಇನ್ನೂ ಐವರು ಆರೋಪಿಗಳ ಒಡೆತನದ ಕಂಪನಿಗಳಿಗೆ ಈ ನಿಷೇಧ ಅನ್ವಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT