ADVERTISEMENT

ವಂಜಾರಾ ರಾಜೀನಾಮೆ ತಿರಸ್ಕಾರ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 10:14 IST
Last Updated 4 ಸೆಪ್ಟೆಂಬರ್ 2013, 10:14 IST

ಅಹಮದಾಬಾದ್ (ಪಿಟಿಐ): ಗುಜರಾತ್‌ನ ವಿವಾದಿತ ಪೊಲೀಸ್ ಅಧಿಕಾರಿ ಹಾಗೂ  ನಕಲಿ ಎನ್‌ಕೌಂಟರ್ ಕುಖ್ಯಾತಿಯ ಮಾಜಿ ಡಿಐಜಿ ವಂಜಾರಾ ಅವರು ನೀಡಿದ್ದ ರಾಜೀನಾಮೆಯನ್ನು ಗುಜರಾತ್ ಸರ್ಕಾರ ಬುಧವಾರ ತಿರಸ್ಕರಿಸಿದೆ.

ಡಿ.ಜಿ. ವಂಜಾರಾ ಅವರು ನೀಡಿದ್ದ ರಾಜೀನಾಮೆಯನ್ನು ತಿರಸ್ಕರಿಸಿರುವುದಾಗಿ ಗುಜರಾತ್ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಕೆ. ನಂದ ಬುಧವಾರ ತಿಳಿಸಿದ್ದಾರೆ.

ಅವರು ರಾಜೀನಾಮೆ ವಿಷಯವಾಗಿ ನಿಖರವಾದ ಕಾರಣಗಳನ್ನು ನೀಡದಿರುವುದರ ಹಿನ್ನೆಲೆಯಲ್ಲಿ  ರಾಜೀನಾಮೆಯನ್ನು ತಿರಸ್ಕರಿಸಲಾಗಿದೆ ಎಂದು ನಂದ ಸ್ಪಷ್ಟಪಡಿಸಿದ್ದಾರೆ.

ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿ ಕಳೆದ ಆರು ವರ್ಷಗಳಿಂದ ಜೈಲಿನಲ್ಲಿರುವ ವಂಜಾರಾ ಒಂದು ಕಾಲದಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಪರಮಾಪ್ತರಾಗಿದ್ದರು.

ಸೋಹ್ರಾಬುದ್ದೀನ್ ಶೇಕ್, ಇಶ್ರತ್ ಜಹಾನ್, ತುಳಿಸಿರಾಮ್ ಪ್ರಜಾಪತಿ ಎನ್‌ಕೌಂಟರ್‌ಗಳಲ್ಲಿ  ಪಾತ್ರ ವಹಿಸಿದ್ದ ಆಪಾದನೆ ಮೇಲೆ ವಂಜಾರಾ ಜೈಲು ಸೇರಿದ್ದರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.