ADVERTISEMENT

ವಾಕ್, ಶ್ರವಣ ದೋಷ: ಕೈನೆಕ್ಟ್ ಬ್ರಿಜ್ ತಂತ್ರಜ್ಞಾನ

​ಪ್ರಜಾವಾಣಿ ವಾರ್ತೆ
Published 17 ಮೇ 2012, 19:30 IST
Last Updated 17 ಮೇ 2012, 19:30 IST

ಹೈದರಾಬಾದ್ (ಪಿಟಿಐ): ವಾಕ್ ಶ್ರವಣ ದೋಷವುಳ್ಳವರು ಇತರರೊಂದಿಗೆ ಸಂವಹನ ನಡೆಸಲು ನೆರವಾಗುವ ತಂತ್ರಜ್ಞಾನವನ್ನು ಮೈಕ್ರೊಸಾಫ್ಟ್ ಇಂಡಿಯಾ ಸಂಸ್ಥೆಯ ಸಿಬ್ಬಂದಿ ಅಭಿವೃದ್ಧಿಪಡಿಸಿದ್ದಾರೆ.

ಜತೆಗೆ, ಅಂಧರಿಗೆ ಒಳಾಂಗಣದಲ್ಲಿ ಅಡೆತಡೆಗಳನ್ನು ನಿವಾರಿಸಿಕೊಂಡು ಹೋಗಲು ನೆರವಾಗುವ ಸಾಧನವನ್ನೂ  ಸಿದ್ಧಪಡಿಸಿದ್ದಾರೆ.

ಬಂಗಾರು ವೆಂಕಟೇಶ್ ಎಂಬುವವರ ನೇತೃತ್ವದಲ್ಲಿ ವಾಕ್ ಶ್ರವಣ ದೋಷವುಳ್ಳವರಿಗೆ `ಕೈನೆಕ್ಟ್ ಬ್ರಿಜ್~ ಎಂಬ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಇದು, ಬೆರಳಿನ ಚಲನೆಯ ರೀತಿ ಅಥವಾ ಸ್ಪೆಲ್ಲಿಂಗ್‌ನ್ನು (ಅಕ್ಷರ ಕ್ರಮ) ಗುರುತಿಸಿ ಅದನ್ನು ಪಠ್ಯವಾಗಿ ಅಥವಾ ಪದ ಸಮುಚ್ಛಯವಾಗಿ ಪರಿವರ್ತಿಸುತ್ತದೆ.

ಮೈಕ್ರೊಸಾಫ್ಟ್ ಕಂಪೆನಿಯು ಗೇಮಿಂಗ್‌ಗೆ ಬಳಸುವ, ವಸ್ತುಗಳನ್ನು ಸ್ಪರ್ಶಿಸದೇ ಗುರುತಿಸಬಲ್ಲ ಕೈನೆಕ್ಟ್ ಸಾಧನವನ್ನು ಬಳಸಿ ಈ ತಂತ್ರಜ್ಞಾನ ಸಿದ್ಧಪಡಿಸಲಾಗಿದೆ.

ಮೈಕ್ರೊಸಾಫ್ಟ್ ಕಂಪೆನಿಯು ತನ್ನ ಸಿಬ್ಬಂದಿಗಾಗಿ ಆಯೋಜಿಸಿರುವ `ಗ್ಯಾರೇಜ್ ವಿಜ್ಞಾನ ಮೇಳ~ದಲ್ಲಿ ಇದನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಕಂಪೆನಿ ಸಿಬ್ಬಂದಿಯ ಮತ್ತೊಂದು ತಂಡವು, ರಿಯಲ್ ಟೈಮ್ ಸ್ಕ್ಯಾನಿಂಗ್ ತಂತ್ರಜ್ಞಾನ ಆಧರಿಸಿ ವ್ಯಕ್ತಿಗೆ ಮುಂದಕ್ಕೆ ಚಲಿಸಬೇಕೋ, ಚಲಿಸಬಾರದೋ ಎಂಬ ಧ್ವನಿ ಮಾಹಿತಿ ನೀಡಬಲ್ಲ, ಅಂಧರಿಗೆ ನೆರವು ನೀಡುವ ಸಾಧನವನ್ನೂ ರೂಪುಗೊಳಿಸಿದೆ.

ಅಂಧ ವ್ಯಕ್ತಿ ಹಾಗೂ ಆತ ಸಾಗುವ ದಿಕ್ಕಿನಲ್ಲಿರುವ ವಸ್ತುಗಳ ನಡುವಿನ ಅಂತರವನ್ನು ಅಳೆದು ಇದು ಧ್ವನಿ ಮಾಹಿತಿ ನೀಡಲಿದೆ. ರಿಷಬ್ ವರ್ಮ ಹಾಗೂ ಇತರ ಮೂವರು `ಕೈನೆಕ್ಟಕಲ್ಸ್~ ಎಂತ ತಂತ್ರಜ್ಞಾನ ಆಧರಿಸಿ ಇದನ್ನು ಸಿದ್ಧಪಡಿಸಿದ್ದಾರೆ. ಒಂದು ವಿಜಿಎ ಕ್ಯಾಮೆರಾ ಹಾಗೂ ಮತ್ತೊಂದು ಡೆಪ್ತ್ ಕ್ಯಾಮೆರಾವನ್ನು ಇದಕ್ಕೆ ಅಳವಡಿಸಲಾಗಿದೆ.

ಈ ಮೇಳದಲ್ಲಿ 58 ತಂಡಗಳು ಭಾಗವಹಿಸಿದ್ದು, ಬಹುತೇಕ ಆವಿಷ್ಕಾರಗಳು ದೈನಂದಿನ ಬದುಕಿನ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಉದ್ದೇಶ ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.