ADVERTISEMENT

ವಿ.ಕೆ.ಸಿಂಗ್ ಜನ್ಮ ದಿನಾಂಕ: ಸರ್ಕಾರದ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2011, 19:30 IST
Last Updated 25 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ಸೇನಾ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಹುಟ್ಟಿದ ದಿನಾಂಕ ಮೇ 10, 1950 ಎಂಬುದನ್ನು ಪುಷ್ಟೀಕರಿಸುವ ಕನಿಷ್ಠ ಐದು ದಾಖಲೆಗಳು ಇವೆ ಎಂದು ಸರ್ಕಾರ ಹೇಳಿದೆ.

ಸಿಂಗ್ ಅವರು ಕಮಿಷನ್ಡ್ ಅಧಿಕಾರಿಯಾಗಿ ನೇಮಕಗೊಂಡ ಸಂದರ್ಭದಲ್ಲಿ ನೀಡಿರುವ ದಾಖಲೆಯಲ್ಲೂ ಇದೇ ದಿನಾಂಕ ನಮೂದಾಗಿದೆ ಎಂದು ಅಟಾರ್ನಿ ಜನರಲ್ ಅವರು ರಕ್ಷಣಾ ಸಚಿವಾಲಯಕ್ಕೆ ತಿಳಿಸಿದ್ದಾರೆ.

ಸಿಂಗ್ ಹುಟ್ಟಿದ ದಿನಾಂಕಕ್ಕೆ ಸಂಬಂಧಿಸಿದಂತೆ ಸರ್ಕಾರದ ದಾಖಲೆಗಳಲ್ಲಿ ಎರಡು ಬೇರೆ ಬೇರೆ ದಿನಾಂಕಗಳ ದಾಖಲೆಗಳು ಇವೆ. ಕೆಲವು ಸಂದರ್ಭಗಳಲ್ಲಿ ಮೇ 10, 1950 ಎಂಬುದು ನಮೂದಾಗಿದ್ದರೆ ಇನ್ನು ಕೆಲವು ವೇಳೆ ಮೇ 10, 1951 ಎಂಬ ದಾಖಲೆಯನ್ನು ಅವರು ಸಲ್ಲಿಸಿದ್ದಾರೆ. ಈ ಎರಡರ ಪೈಕಿ ಸರ್ಕಾರ ಮೇ 10, 1950ರ ದಾಖಲೆಯನ್ನೇ ನಿಜವಾದ ವಯಸ್ಸೆಂದು ಪರಿಗಣಿಸಲು ನಿರ್ಧರಿಸಿದೆ. ಆದರೆ ಸಿಂಗ್ 1951ರ ದಿನಾಂಕವನ್ನು ನಿಜವಾದ ದಾಖಲೆ ಎಂದು ಪರಿಗಣಿಸಲು ರಕ್ಷಣಾ ಸಚಿವಾಲಯವನ್ನು ಕೋರಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.