ADVERTISEMENT

ವಿದೇಶಕ್ಕೆ ತೆರಳಲು ಕಲ್ಮಾಡಿಗೆ ಅನುಮತಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

ನವದೆಹಲಿ (ಐಎಎನ್‌ಎಸ್): ಕಜಕಿಸ್ತಾನದಲ್ಲಿ ಇದೇ 27ರಿಂದ ಆರಂಭವಾಗಲಿರುವ 73ನೇ ಏಷ್ಯನ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಮಂಡಳಿ ಸಭೆಯಲ್ಲಿ ಭಾಗವಹಿಸಲು ಕಾಮನ್‌ವೆಲ್ತ್ ಕ್ರೀಡಾಕೂಟ ಸಂಘಟನಾ ಸಮಿತಿಯ (ಸಿಡಬ್ಲ್ಯೂಜಿ) ಮಾಜಿ ಅಧ್ಯಕ್ಷ ಸುರೇಶ್ ಕಲ್ಮಾಡಿ ಅವರಿಗೆ ವಿಶೇಷ ಸಿಬಿಐ ನ್ಯಾಯಾಲಯ ಅನುಮತಿ ನೀಡಿದೆ.

ಕಜಾಕಿಸ್ತಾನದ ಅಲ್‌ಮಾಟಿಯಲ್ಲಿ ನಡೆಯಲಿರುವ ಸಭೆಯಲ್ಲಿ ಕಲ್ಮಾಡಿ ಹಾಗೂ ಅವರ ಸಹಾಯಕ ಲಲಿತ್ ಭಾನೋಟ್ ಅವರು ಭಾಗವಹಿಸಬಹುದು ಎಂದು ವಿಶೇಷ ನ್ಯಾಯಮೂರ್ತಿ ತಲ್‌ವಂತ್ ಸಿಂಗ್ ಹೇಳಿದ್ದಾರೆ.

ಆದರೆ ತೆರಳುವ ಮುನ್ನ ಆಪಾದಿತರು ಹತ್ತು ಲಕ್ಷ ರೂಪಾಯಿಯ ಬ್ಯಾಂಕ್ ಖಾತರಿ, ಅಲ್‌ಮಾಟಿಯಲ್ಲಿನ ತಮ್ಮ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಷರತ್ತು ವಿಧಿಸಿದ್ದಾರೆ.

ಜೊತೆಗೆ ಈ ಭೇಟಿ ವೇಳೆ ಸಿಡಬ್ಲ್ಯುಜಿ ಪ್ರಕರಣದ ಸಾಕ್ಷಿಗಳ ಮೇಲೆ ಯಾವುದೇ ಪ್ರಭಾವ ಬೀರಬಾರದು ಎಂದೂ ನ್ಯಾಯಾಲಯ ಆದೇಶಿಸಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.