ನವದೆಹಲಿ (ಪಿಟಿಐ): ವಿದ್ಯುತ್ ಕಳವು ಪ್ರಕರಣದಲ್ಲಿ ವ್ಯಕ್ತಿಯೊಬ್ಬರಿಗೆ ದೆಹಲಿ ನ್ಯಾಯಾಲಯ ನಾಲ್ಕು ಲಕ್ಷ ರೂಪಾಯಿ ದಂಡ ವಿಧಿಸಿದೆ.
ವಿದ್ಯುತ್ ಲೈನ್‌ನಿಂದ ಮನೆಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡು ಉಪಯೋಗಿಸುತ್ತಿದ್ದ 66 ವರ್ಷದ ಸುಂದರ್ ಸಿಂಗ್ ಈ ಶಿಕ್ಷೆಗೆ ಗುರಿಯಾಗಿದ್ದಾರೆ. ಆರೋಪಿಯು ವಿದ್ಯುತ್ ಕಳವು ಪ್ರಕರಣದಲ್ಲಿ ನೇರ ಭಾಗಿಯಾಗಿದ್ದಕ್ಕೆ 2.42 ಲಕ್ಷ ರೂಪಾಯಿ ಮತ್ತು ವಿದ್ಯುತ್ ಕಂಪೆನಿಗೆ ನಷ್ಟ ಉಂಟುಮಾಡಿರುವುದಕ್ಕೆ 1.61 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.