ADVERTISEMENT

ವಿವಾಹ ನೋಂದಣಿಗೆ ಶರ್ಮಿಳಾ ಅರ್ಜಿ

ಪಿಟಿಐ
Published 13 ಜುಲೈ 2017, 19:30 IST
Last Updated 13 ಜುಲೈ 2017, 19:30 IST
ವಿವಾಹ ನೋಂದಣಿಗೆ ಶರ್ಮಿಳಾ ಅರ್ಜಿ
ವಿವಾಹ ನೋಂದಣಿಗೆ ಶರ್ಮಿಳಾ ಅರ್ಜಿ   

ಕೊಡೈಕೆನಾಲ್‌ (ತಮಿಳುನಾಡು): ಮಣಿಪುರದ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್‌ ಶರ್ಮಿಳಾ ಅವರು ಬ್ರಿಟನ್‌ ಮೂಲದ ತಮ್ಮ ಸಂಗಾತಿ ದೇಸ್ಮಂಡ್ ಕುಟಿನ್ಹೊ ಅವರನ್ನು ವಿವಾಹವಾಗಲು ಇಲ್ಲಿನ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.

‘ಶರ್ಮಿಳಾ ಬುಧವಾರ ಸಂಜೆ ಕುಟಿನ್ಹೊ ಅವರೊಡನೆ ಬಂದು, ಹಿಂದೂ ವಿವಾಹ ಕಾಯ್ದೆಯಡಿ ಮದುವೆಯಾಗಲು ಅರ್ಜಿ ಸಲ್ಲಿಸಿದ್ದಾರೆ’ ಎಂದು ಉಪ ನೋಂದಣಾಧಿಕಾರಿ ರಾಜೇಶ್‌ ತಿಳಿಸಿದ್ದಾರೆ.

‘ಈ ಕಾಯ್ದೆಯಡಿ ಅಂತರ್ಧರ್ಮೀಯ ವಿವಾಹಕ್ಕೆ ತಕ್ಷಣವೇ ಅನುಮತಿ ನೀಡಲಾಗುವುದಿಲ್ಲ. ಆಕ್ಷೇಪಗಳೇನಾದರೂ ಇದ್ದಲ್ಲಿ ಅರ್ಜಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿ, ವಿಶೇಷ ವಿವಾಹ ಕಾಯ್ದೆಯಡಿ ವಿವಾಹವನ್ನು ನೋಂದಣಿ ಮಾಡಲಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಮದುವೆಯ ದಿನಾಂಕದ ಬಗ್ಗೆ  ಸ್ಥಳೀಯ ಪೊಲೀಸರು ಮತ್ತು ತಹಶೀಲ್ದಾರ್‌ ಅವರು ಶರ್ಮಿಳಾ ಅವರಿಂದ ಮಾಹಿತಿ ಕೇಳಿದ್ದಾರೆ.

ಮಣಿಪುರ ವಿಧಾನಸಭೆಗೆ ಕಳೆದ ಮಾರ್ಚ್‌ನಲ್ಲಿ ನಡೆದ ಚುನಾವಣೆಯಲ್ಲಿ ತಾವು ಹಾಗೂ ತಮ್ಮ ಪೀಪಲ್ಸ್‌ ರಿಸರ್ಜೆನ್ಸ್‌ ಅಂಡ್‌ ಜಸ್ಟಿಸ್‌ ಅಲಯನ್ಸ್‌ ಪಕ್ಷ ಹಿನ್ನಡೆ ಅನುಭವಿಸಿದ ಬಳಿಕ, ಕುಟಿನ್ಹೊ ಅವರೊಂದಿಗೆ 44 ವರ್ಷದ ಶರ್ಮಿಳಾ ಈ ಪಟ್ಟಣದಲ್ಲಿ ನೆಲೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.