ADVERTISEMENT

ವಿವಾಹ ಪೂರ್ವ ಲೈಂಗಿಕತೆ ಅನೈತಿಕ: ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 5 ಜನವರಿ 2014, 19:30 IST
Last Updated 5 ಜನವರಿ 2014, 19:30 IST

ನವದೆಹಲಿ (ಪಿಟಿಐ): ‘ವಿವಾಹ ಪೂರ್ವ ಲೈಂಗಿಕತೆ ಅನೈತಿಕ. ಯಾವ  ಧರ್ಮದಲ್ಲೂ ಇದಕ್ಕೆ ಅವಕಾಶ ಇಲ್ಲ’ ಎಂದು ದೆಹಲಿ ಕೋರ್ಟ್‌ ಹೇಳಿದೆ.

‘ಒಬ್ಬ ಗಂಡು, ಮದುವೆಯಾಗುವ ಭರವಸೆ ನೀಡಿ ಸುಶಿಕ್ಷಿತ, ಉದ್ಯೋಗಸ್ಥ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅತ್ಯಾಚಾರ ಎನಿಸಿಕೊಳ್ಳುವು­ದಿಲ್ಲ’ ಎಂದು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ವೀರೇಂದ್ರ ಭಟ್‌ ಹೇಳಿದ್ದಾರೆ.

ಅತ್ಯಾಚಾರ ಪ್ರಕರಣದ ಆರೋಪಿಯನ್ನು ಖುಲಾಸೆ ಮಾಡಿದ ಕೋರ್ಟ್‌,  ‘ಮದುವೆಯಾಗುವ ಭರವಸೆ ನೀಡಿ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಪುರುಷ ಕೊನೆಗೆ ತಾನು ಕೊಟ್ಟ ಮಾತು ಉಳಿಸಿಕೊಳ್ಳದೆಯೂ ಇರಬಹುದು. ಆದರೆ ಮಹಿಳೆ ಎಚ್ಚರದಿಂದ ಇರಬೇಕು. ವಿವಾಹ ಪೂರ್ವ ಲೈಂಗಿಕತೆಯ ಪರಿಣಾಮಗಳು ಏನು ಎನ್ನುವುದನ್ನು ತಿಳಿದಿರಬೇಕು’ ಎಂದು ಬುದ್ಧಿಮಾತು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.