ವಿಶಾಖಪಟ್ಟಣ (ಪಿಟಿಐ): ವಿಶಾಖಪಟ್ಟಣ ಉಕ್ಕು ಘಟಕದಲ್ಲಿ ಬುಧವಾರ ರಾತ್ರಿ ಭಾರಿ ಸ್ಫೋಟ ಸಂಭವಿಸಿ ಕನಿಷ್ಠ 8 ಮಂದಿ ಸತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಇಸ್ಪ್ಯಾಟ್ ನಿಗಮ್ ಲಿಮಿಟೆಡ್ ಘಟಕದ ಉಕ್ಕು ಕರಗಿಸುವ ಕುಲುಮೆ ಬಳಿ ಆಮ್ಲಜನಕ ನಿಯಂತ್ರಣಾ ಘಟಕದಲ್ಲಿ ಸ್ಫೋಟ ಸಂಭವಿಸಿತು ಎಂದು ಮೂಲಗಳು ತಿಳಿಸಿವೆ.
ತಾಂತ್ರಿಕ ತೊಂದರೆಯೇ ಈ ದುರ್ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ. ಘಟಕದಲ್ಲಿ ಹೆಚ್ಚು ಒತ್ತಡ ಉಂಟಾಗಿದ್ದೇ ಸ್ಫೋಟಕ್ಕೆ ಕಾರಣ ಇರಬಹುದು ಎನ್ನಲಾಗಿದೆ. ಸುಮಾರು 15 ಮಂದಿ ಗಾಯಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.