ADVERTISEMENT

ವೀಸಾಕ್ಕಾಗಿ ಲಂಚ ಪ್ರಕರಣ ಅಧಿಕಾರಿ ಸೇರಿ 3 ಬಂಧನ

ಪಿಟಿಐ
Published 21 ಮೇ 2018, 19:26 IST
Last Updated 21 ಮೇ 2018, 19:26 IST

ನವದೆಹಲಿ: ಪಾಕಿಸ್ತಾನದ ವಲಸಿಗರಿಗೆ ದೀರ್ಘಾವಧಿ ವೀಸಾ ನೀಡಲು ಲಂಚದ ಬೇಡಿಕೆ ಇಟ್ಟ ಪ್ರಕರಣದಲ್ಲಿ ಗೃಹ ಸಚಿವಾಲಯದ ಅಧಿಕಾರಿ ಸೇರಿ ಮೂವರನ್ನು ಬಂಧಿಸಲಾಗಿದ್ದು, ಈ ಪ್ರಕರಣದ ಬಗ್ಗೆ ಆಂತರಿಕ ತನಿಖೆ ನಡೆಸಲು ಗೃಹ ಸಚಿವಾಲಯ ಆದೇಶ ನೀಡಿದೆ.

ಭಾರತೀಯ ಪೌರತ್ವಕ್ಕೆ ಪಾಕಿಸ್ತಾನಿ ವಲಸಿಗರು ಸಲ್ಲಿಸಿರುವ ಅರ್ಜಿಗಳನ್ನು ಮತ್ತು ದೀರ್ಘಾವಧಿಯ ವೀಸಾ (ಎಲ್‌ಟಿವಿ) ವಿಸ್ತರಣೆ ಅರ್ಜಿಗಳು ಬಾಕಿ ಉಳಿದಿದ್ದರೆ ಅವುಗಳನ್ನು ತಕ್ಷಣ ವಿಲೇವಾರಿಗೊಳಿಸುವಂತೆ ಸಚಿವಾಲಯ ಅಧಿಕಾರಿಗಳಿಗೆ ಆದೇಶ ನೀಡಿದೆ.

‘ಪಾಕಿಸ್ತಾನಿ ವಲಸಿಗರಿಂದ ಲಂಚಕ್ಕೆ ಇಲಾಖೆಯ ಅಧಿಕಾರಿಗಳು ಒತ್ತಾಯಿಸಿರುವ ಆರೋಪ ಸಂಬಂಧ ನಾವು ಆಂತರಿಕ ವಿಚಾರಣೆ ನಡೆಸುತ್ತೇವೆ. ಲೋಪ ಪತ್ತೆಹಚ್ಚಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.