ADVERTISEMENT

ವೃದ್ಧ ಪೋಷಕರ ನಿರ್ಲಕ್ಷಿಸಿದರೆ 6 ತಿಂಗಳು ಜೈಲು

ಶಿಕ್ಷೆ ಅವಧಿ ಹೆಚ್ಚಿಸಲು ಕೇಂದ್ರ ಚಿಂತನೆ

ಪಿಟಿಐ
Published 12 ಮೇ 2018, 19:30 IST
Last Updated 12 ಮೇ 2018, 19:30 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ನವದೆಹಲಿ: ವೃದ್ಧ ಪೋಷಕರನ್ನು ನಿರ್ಲಕ್ಷಿಸುವ ಮಕ್ಕಳಿಗೆ ವಿಧಿಸುತ್ತಿದ್ದ ಮೂರು ತಿಂಗಳ ಜೈಲು ಶಿಕ್ಷೆಯನ್ನು ಆರು ತಿಂಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಇದಕ್ಕಾಗಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ’ಪೋಷಕರ ಯೋಗಕ್ಷೇಮ, ನಿರ್ವಹಣೆ ಮತ್ತು ಹಿರಿಯ ನಾಗರಿಕರ ಕಾಯ್ದೆ(2007)'ಗೆ ತಿದ್ದುಪಡಿ ತರಲು ಮುಂದಾಗಿದೆ.

ಮಕ್ಕಳು ಮತ್ತು ಅವರ ಹೊಣೆಗಾರಿಕೆ ವ್ಯಾಖ್ಯಾನವನ್ನೂ ವಿಸ್ತರಿಸಲು ಚಿಂತನೆ ನಡೆಸಿದ್ದು, ದತ್ತು ಮಕ್ಕಳು, ಮಲಮಕ್ಕಳು, ಅಳಿಯ, ಸೊಸೆಯನ್ನು ಸಹ ಈ ವ್ಯಾಪ್ತಿಗೆ  ತರಲು ಚಿಂತನೆ ನಡೆಸಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಸದ್ಯ ಜಾರಿಯಲ್ಲಿರುವ ಕಾಯ್ದೆಯಲ್ಲಿ ಹೆತ್ತ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಮಾತ್ರ ಹೊಣೆಗಾರಿಕೆ ನಿಗದಿ ಮಾಡಲಾಗಿದೆ. ಹೊಣೆ ಹೊತ್ತುಕೊಳ್ಳದ ಮಕ್ಕಳು, ಪೋಷಕರಿಗೆ ಪ್ರತಿ ತಿಂಗಳು ₹10 ಸಾವಿರ ಗರಿಷ್ಠ ನಿರ್ವಹಣಾ ವೆಚ್ಚ ನೀಡಬೇಕಾಗಿತ್ತು. ಹೊಸ ಕಾಯ್ದೆಯಲ್ಲಿ ಆ ಮಿತಿಯನ್ನು ರದ್ದುಪಡಿಸುವ ಸಾಧ್ಯತೆ ಇದೆ. ಮಕ್ಕಳ ಆದಾಯದ ಮೇಲೆ ಈ ಮಿತಿಯನ್ನು ನಿಗದಿಗೊಳಿಸುವ ಸಾಧ್ಯತೆ ಇದೆ. ಹೆಚ್ಚು ಆದಾಯ ಹೊಂದಿರುವ ಮಕ್ಕಳು, ಪೋಷಕರಿಗೆ ಹೆಚ್ಚು ನಿರ್ವಹಣಾ ವೆಚ್ಚ ನೀಡಬೇಕಾಗುತ್ತದೆ.

ಮಕ್ಕಳು ನಿರ್ಲಕ್ಷಿಸಿದರೆ ಇಲ್ಲವೇ ನಿರ್ವಹಣಾ ವೆಚ್ಚ ನೀಡಲು ನಿರಾಕರಿಸಿದರೆ ವೃದ್ಧ ಪೋಷಕರು ನಿರ್ವಹಣಾ ನ್ಯಾಯಮಂಡಳಿಗೆ ದೂರು ಸಲ್ಲಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.