ADVERTISEMENT

ವೆಂಙರ ಉಪಚುನಾವಣೆ: ಐಯುಎಂಎಲ್ ಅಭ್ಯರ್ಥಿ ಕೆಎನ್‍ಎ ಖಾದರ್ ವಿಜಯಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 9:58 IST
Last Updated 15 ಅಕ್ಟೋಬರ್ 2017, 9:58 IST
ಕೃಪೆ:ಟ್ವಿಟರ್
ಕೃಪೆ:ಟ್ವಿಟರ್   

ಮಲಪ್ಪುರಂ: ಕೇರಳದ ಮಲಪ್ಪುರ ಜಿಲ್ಲೆ ವೆಂಙರ ವಿಧಾನಸಭಾಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಐಯುಎಂಎಲ್ ಅಭ್ಯರ್ಥಿ ಕೆಎನ್‍ಎ ಖಾದರ್ ಗೆಲುವು ಸಾಧಿಸಿದ್ದಾರೆ. ಸಿಪಿಎಂ ಅಭ್ಯರ್ಥಿ ಪಿಪಿ ಬಷೀರ್ ಅವರನ್ನು 23,310 ಮತಗಳ ಅಂತರದಿಂದ ಪರಾಭವಗೊಳಿಸಿ ಖಾದರ್ ವಿಧಾನಸಭಾ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.

ಖಾದರ್ ಅವರು ಒಟ್ಟು  65,227 ಮತಗಳನ್ನು ಗಳಿಸಿದರೆ ಎಲ್‍ಡಿಎಫ್ ಅಭ್ಯರ್ಥಿ ಪಿಪಿ ಬಷೀರ್‍ ಅವರಿಗೆ ಸಿಕ್ಕಿದ್ದು 41,917 ಮತಗಳು. ಬಿಜೆಪಿ ಅಭ್ಯರ್ಥಿ ಜನಚಂದ್ರ ಅವರನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿ ಎಸ್‍ಡಿಪಿಐ ಅಭ್ಯರ್ಥಿ ಕೆ.ಸಿ ನಸೀರ್ ಮೂರನೇ ಸ್ಥಾನಗಳಿಸಿದ್ದಾರೆ. ನಸೀರ್ ಅವರು 8648 ಮತಗಳನ್ನು ಗಳಿಸಿದ್ದು ಜನಚಂದ್ರನ್ ಅವರಿಗೆ 5728 ಮತಗಳು ಲಭಿಸಿವೆ.

ವೆಂಙರದಲ್ಲಿ ಅಭ್ಯರ್ಥಿಗಳಿಗೆ ಸಿಕ್ಕಿದ ಮತಗಳು
ಕೆಎನ್‍ಎ ಖಾದರ್ (ಮುಸ್ಲಿಂ ಲೀಗ್ )-65,227
ಪಿ,ಪಿ ಬಷೀರ್ (ಸಿಪಿಎಂ) -41,917
ಕೆ.ಸಿ ನಸೀರ್  (ಎಸ್‌ಡಿಪಿಐ) -8,648
ಕೆ. ಜನಚಂದ್ರನ್ (ಬಿಜೆಪಿ)  -5,728
ನೋಟಾ  -502
ಕರುಮಣ್ಣಿಲ್ ಹಂಸ (ಸ್ವತಂತ್ರ ಅಭ್ಯರ್ಥಿ)-442
ಶ್ರೀನಿವಾಸ್ (ಸ್ವತಂತ್ರ ಅಭ್ಯರ್ಥಿ)-159

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.