ADVERTISEMENT

ವೇತನ ಕಡಿತ ಆದೇಶ ಹಿಂದಕ್ಕೆ

ಪಿಟಿಐ
Published 7 ಮಾರ್ಚ್ 2018, 19:30 IST
Last Updated 7 ಮಾರ್ಚ್ 2018, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕವಾಯತು ಮಾಡುವಾಗ ಪ್ರಧಾನಿಗೆ ಅಗೌರವ ತೋರಿದ್ದಾರೆ ಎಂಬ ಕಾರಣಕ್ಕೆ ಯೋಧರೊಬ್ಬರಿಗೆ ಒಂದು ವಾರದ ವೇತನ ಕಡಿತಗೊಳಿಸಿದ್ದ ಆದೇಶವನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಬುಧವಾರ ಹಿಂಪಡೆದಿದೆ.

ಈ ಆದೇಶ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ಆದೇಶ ಹಿಂಪಡೆಯುವಂತೆ ಸೂಚಿಸಿದ್ದರು ಎಂದು ಅರೆ ಸೇನಾಪಡೆಯ ವಕ್ತಾರ ತಿಳಿಸಿದ್ದಾರೆ.

ಫೆಬ್ರುವರಿ 21ರಂದು ಕವಾಯತು ನಡೆಯುತ್ತಿದ್ದ ವೇಳೆ, ಯೋಧ ಸಂಜೀವ್‌ ಕುಮಾರ್‌ ‘ಮೋದಿ ಕಾರ್ಯಕ್ರಮ’ ಎಂಬ ಪದ ಬಳಸಿದ್ದರು. ಇದನ್ನು ತಪ್ಪು ಎಂದು ಪರಿಗಣಿಸಿ ಒಂದು ವಾರದ ವೇತನ ಕಡಿತಗೊಳಿಸಿ ಆದೇಶ ಹೊರಡಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.