
ಪ್ರಜಾವಾಣಿ ವಾರ್ತೆನವದೆಹಲಿ (ಪಿಟಿಐ): ಬಾಲಿವುಡ್‌ನ ಹಿರಿಯ ನಟಿ ಶಬಾನಾ ಆಜ್ಮಿ ಕೆನಡಾದ ವ್ಯಾಂಕೋವರ್‌ನ ಸಿಮನ್ ಫ್ರೆಸರ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆಯಾಗಿದ್ದಾರೆ.
ಇದು ಅವರಿಗೆ ಸಂದ ನಾಲ್ಕನೇ ಗೌರವ ಡಾಕ್ಟರೇಟ್ ಪದವಿಯಾಗಿದೆ. 61 ವರ್ಷದ ಆಜ್ಮಿ ಅವರು ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಜಾಧವ್‌ಪುರ ವಿಶ್ವವಿದ್ಯಾಲಯ (2003), ಬ್ರಿಟನ್‌ನ ಯಾರ್ಕ್‌ಷೈರ್‌ನ ಲೀಡ್ಸ್ ಮೆಟ್ರೊಪಾಲಿಟನ್ ವಿ.ವಿ (2007) ಹಾಗೂ 2008ರಲ್ಲಿ ಜಾಮಿಯಾ ಮಿಲಿಯಾ ವಿ.ವಿ ಡಾಕ್ಟರೇಟ್ ಪದವಿ ನೀಡಿದ್ದವು. ಬುಧವಾರ ನಡೆಯುವ ಸಮಾರಂಭದಲ್ಲಿ ಶಬನಾ ಪದವಿ ಸ್ವೀಕರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.