ADVERTISEMENT

ಶಾಲೆಗಳಿಗೆ ಸಂಸದರ ಅನುದಾನ: ಅನುಮತಿ

ಮಾರ್ಗದರ್ಶಿ ಸೂತ್ರಗಳಿಗೆ ತಿದ್ದುಪಡಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 19:59 IST
Last Updated 19 ಸೆಪ್ಟೆಂಬರ್ 2013, 19:59 IST

ನವದೆಹಲಿ: ಶಾಲೆಗಳ ಪೀಠೋಪ ಕರಣ ಖರೀದಿ ಹಾಗೂ ಸಹಕಾರಿ ಸಂಸ್ಥೆಗಳಿಗೆ ಮೂಲಸೌಕರ್ಯ ನಿರ್ಮಿಸಿಕೊಳ್ಳಲು ಇನ್ನುಮುಂದೆ ಸಂಸದರು ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಿಂದ ಅನುದಾನವನ್ನು ನೀಡಬಹುದಾಗಿದೆ.

ಯೋಜನೆಯ ಮಾರ್ಗದರ್ಶಿ ಸೂತ್ರಗಳಿಗೆ ಇದೀಗ ತಿದ್ದುಪಡಿ ಮಾಡಲಾಗಿದ್ದು, ಸರ್ಕಾರಿ ಇಲ್ಲವೆ ಅನುದಾನಕ್ಕೆ ಒಳಪಟ್ಟ ಶಾಲೆಗಳಿಗೆ ಅಗತ್ಯವಾದ ಪೀಠೋಪಕರಣ ಖರೀದಿಸಲು ಅನುದಾನ (ವರ್ಷಕ್ಕೆ ಗರಿಷ್ಠ ರೂ 50 ಲಕ್ಷವರೆಗೆ) ನೀಡಬಹುದಾಗಿದೆ.

ಪ್ರಮಾಣಿತ ಸಹಕಾರಿ ಸಂಸ್ಥೆಗಳಿಗೆ ಅಗತ್ಯವಾದ ಕಟ್ಟಡ ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸಲು  ಅನುದಾನ (ವರ್ಷಕ್ಕೆ ಗರಿಷ್ಠ ರೂ 1 ಕೋಟಿವರೆಗೆ ) ಒದಗಿಸಲು ಸಹ ಇದೀಗ ಅವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.