ಭುವನೇಶ್ವರ (ಪಿಟಿಐ): ನಕ್ಸಲೀಯರು ಒತ್ತೆ ಇರಿಸಿಕೊಂಡಿರುವ ಇಟಲಿ ಪ್ರಜೆಯ ಬಿಡುಗಡೆಗಾಗಿ ಒಡಿಶಾ ಸರ್ಕಾರ ಮತ್ತು ನಕ್ಸಲ್ ಸಂಧಾನಕಾರರ ನಡುವೆ ಸೋಮವಾರ ಹೊಸ ಸುತ್ತಿನ ಮಾತುಕತೆ ಆರಂಭಗೊಂಡಿತು.
ಈ ಮಧ್ಯೆ ಬಿಜೆಡಿ ಶಾಸಕ ಹಿಕಾಕಾ ಅವರನ್ನು ಒತ್ತೆ ಇರಿಸಿಕೊಂಡಿರುವ ಇನ್ನೊಂದು ನಕ್ಸಲ್ ಬಣ, ತಮ್ಮ ವಿರುದ್ಧದ ಶೋಧ ಕಾರ್ಯಾಚರಣೆ ತಕ್ಷಣ ಸ್ಥಗಿತ, ಜೈಲಿನಲ್ಲಿರುವ ಮುಖಂಡರ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.