ADVERTISEMENT

ಶೇ 85ರಷ್ಟು ಜನರಿಗೆ ಸರ್ಕಾರದ ಮೇಲೆ ನಂಬಿಕೆ

ಪ್ಯೂ ರಿಸರ್ಚ್ ಸಮೀಕ್ಷೆಯಲ್ಲಿ ಭಾರತೀಯರ ಅಭಿಮತ

ಏಜೆನ್ಸೀಸ್
Published 17 ಅಕ್ಟೋಬರ್ 2017, 19:05 IST
Last Updated 17 ಅಕ್ಟೋಬರ್ 2017, 19:05 IST
ಶೇ 85ರಷ್ಟು ಜನರಿಗೆ ಸರ್ಕಾರದ ಮೇಲೆ ನಂಬಿಕೆ
ಶೇ 85ರಷ್ಟು ಜನರಿಗೆ ಸರ್ಕಾರದ ಮೇಲೆ ನಂಬಿಕೆ   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ವಿಶ್ವಾಸ ಇದೆ ಎಂದು ಶೇ 85 ಮಂದಿ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ ‘ಪ್ಯೂ ರಿಸರ್ಚ್’ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ 39ರಷ್ಟು ಜನ ‘ನಾವು ಸರ್ಕಾರವನ್ನು ತುಂಬಾ ನಂಬುತ್ತೇವೆ’ ಎಂದು ತಿಳಿಸಿದ್ದರೆ, ಶೇ 46ರಷ್ಟು ಜನ ‘ಸರ್ಕಾರವನ್ನು ಸ್ವಲ್ಪ ನಂಬುತ್ತೇವೆ’ ಎಂದು ಹೇಳಿದ್ದಾರೆ.

ಇದರ ಜತೆಯಲ್ಲೇ, ಅರ್ಧಕ್ಕಿಂತಲೂ ಹೆಚ್ಚು ಭಾರತೀಯರು ‘ನಮ್ಮ ದೇಶಕ್ಕೆ ಸೇನಾಡಳಿತ ಹೆಚ್ಚು ಸೂಕ್ತ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಸಂಸತ್ತಿನ ಸದಸ್ಯರ ಮತ್ತು ಪರಿಣತರ ಸಲಹೆ ಕೇಳದೆಯೇ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವ ನಾಯಕ ಇರಬೇಕು ಶೇ 55ರಷ್ಟು ಜನರು ಪ್ರತಿಪಾದಿಸಿದ್ದಾರೆ.

ADVERTISEMENT

ಭಾರತವೂ ಸೇರಿ ಒಟ್ಟು 38 ದೇಶಗಳಲ್ಲಿ ಪ್ಯೂ ಇಂತಹ ಸಮೀಕ್ಷೆ ನಡೆಸಿದೆ. ಸಮೀಕ್ಷೆಗಾಗಿ 41,953 ಜನ‘
ರನ್ನು ಸಂಪರ್ಕಿಸಲಾಗದೆ. ಸಮೀಕ್ಷೆಯ ವರದಿಯನ್ನು ಸಂಸ್ಥೆ ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.