ಶ್ರೀನಗರ (ಪಿಟಿಐ) :ಪ್ರಧಾನಿ ಮನಮೋಹನ್ ಸಿಂಗ್ ಅವರ ಜಮ್ಮು ಕಾಶ್ಮೀರ ಭೇಟಿಗೆ ಮೂರು ದಿನಗಳು ಬಾಕಿ ಇರುವಂತೆಯೇ ನಗರದ ಹೃದಯ ಭಾಗವಾದ ಹರಿಸಿಂಗ್ ಮುಖ್ಯಬೀದಿಯ ಮಾರುಕಟ್ಟೆಯಲ್ಲಿ ಉಗ್ರರು ಇಬ್ಬರು ಪೊಲೀಸರನ್ನು ಗುಂಡಿಕ್ಕಿ ಶನಿವಾರ ಹತ್ಯೆ ಮಾಡಿದ್ದಾರೆ
ಸೈಲೆನ್ಸರ್ ಅಳವಡಿಸಿದ್ದ ಪಿಸ್ತೂಲ್ ಬಳಸಿ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಗುಂಡೇಟು ತಗುಲಿದ ಮುಖ್ಯ ಪೇದೆ ಮೊಹಮ್ಮದ್ ಮಕ್ಬೂಲ್ ಮತ್ತು ಪೇದೆ ನಜೀರ್ ಅಹಮದ್ ಅವರು ಸಾವನ್ನಪ್ಪಿದರೆಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಘಟನೆ ವೇಳೆ ಹುಡುಗಿಯೊಬ್ಬಳೂ ಸಹ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
ಜನರಿಂದ ತುಂಬಿದ್ದ ಮಾರುಕಟ್ಟೆ ದಿಢೀರನೆ ಎರಗಿದ ಈ ದುರ್ಘಟನೆ ಬಳಿಕ ಬಣಗುಡಲಾರಂಭಸಿತು. ಭದ್ರತಾ ಸಿಬ್ಬಂದಿಗಳು ಸ್ಥಳದಲ್ಲಿ ಉಗ್ರರಿಗಾಗಿ ತೀವ್ರ ಶೋಧ ಕಾರ್ಯ ನಡೆಸಿದರು.ಬನಿಹಾಲ್ ಮತ್ತು ಕ್ವಾಜಿಗುಂಡ್ ಮಧ್ಯೆ ಆರಂಭವಾಗಲಿರುವ ರೈಲು ಸೇವೆಯ ಉದ್ಘಾಟನೆಗಾಗಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಜೂನ್ 25ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಉಗ್ರರು ದುಷ್ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಇದುವರೆಗೂ ಯಾವುದೇ ಸಂಘಟನೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.