ADVERTISEMENT

ಷರಿಯತ್‌ ಈ ನೆಲದ ಕಾನೂನು ಅತಿಕ್ರಮಿಸುವಂತಿಲ್ಲ: ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 19:59 IST
Last Updated 25 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ‘ಮುಸ್ಲಿಂ ವೈಯಕ್ತಿಕ ಕಾನೂನು, ನಮ್ಮ ನೆಲದ ಕಾನೂನನ್ನು ಅತಿಕ್ರಮಿಸುವಂತಿಲ್ಲ’ ಎಂದು ದೆಹಲಿ ಕೋರ್ಟ್‌ ಬುಧವಾರ ಹೇಳಿದೆ.
ತನ್ನದೇ ಸಮುದಾಯಕ್ಕೆ (ಮುಸ್ಲಿಂ) ಸೇರಿದ 17 ವರ್ಷದ ಯುವತಿಯನ್ನು ಅಪಹರಿಸಿ ಆಕೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದ  ಆರೋಪಿ ಸಲ್ಲಿ ಸಿದ್ದ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್, ‘ಈ ನೆಲದ ಕಾನೂನು ಏಕ ಪ್ರಕಾರ ದಲ್ಲಿ ಎಲ್ಲ ಕಡೆ ಅನ್ವಯ ವಾಗಬೇಕು’ ಎಂದು ಹೇಳಿತು.

‘ಕಾನೂನಿನ ಮುಂದೆ ಎಲ್ಲರೂ ಸಮಾನರು ಎನ್ನುವ ಸಾಂವಿಧಾನಿಕ ಪರಿ ಕಲ್ಪನೆ ದುರ್ಬಲಗೊಳಿಸುವಂತಿಲ್ಲ’ ಎಂದೂ ನ್ಯಾಯಾಲಯ ತಿಳಿಸಿತು.
‘ಈ ಯುವತಿ ನನ್ನನ್ನು ಪ್ರೀತಿಸುತ್ತಿದ್ದು, ನಾವಿಬ್ಬರೂ ಮದುವೆಯಾಗಲು ಬಯಸಿದ್ದೇವೆ. ಆದರೆ ಇದಕ್ಕೆ  ಆಕೆ ಪೋಷಕರು ತಕರಾರು ಮಾಡುತ್ತಿದ್ದಾರೆ.

ಹಾಗಾಗಿ ಆಕೆ ತನ್ನಿಷ್ಟದಂತೆ ನನ್ನೊಂದಿಗೆ ಜೈಪುರಕ್ಕೆ  ಬಂದಳು. ನಂತರ ನಾಮ್ಮಿಬ್ಬರು ದೈಹಿಕವಾಗಿ ಒಂದಾದೆವು. ಕೆಲ ಸಮಯದ ನಂತರ ಆಕೆ ತನ್ನ ಮನೆಗೆ ವಾಪಸಾ ದಳು. ಪೋಷಕರ ಒತ್ತಡಕ್ಕೆ ಮಣಿದು ನನ್ನ ವಿರುದ್ಧ ಅಪಹರಣ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಿದಳು’  ಎಂದು ಆರೋಪಿ ನ್ಯಾಯಾಲಯಕ್ಕೆ ತಿಳಿಸಿದ. ಯುವತಿಯ ದೂರಿನ ಮೇಲೆ ಈತನನ್ನು ಪೊಲೀಸರು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.