ADVERTISEMENT

ಸಚಿವ ಬೊಖಿರಿಯಾಗೆ 3 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 20:00 IST
Last Updated 15 ಜೂನ್ 2013, 20:00 IST

ರಾಜ್‌ಕೋಟ್ (ಗುಜರಾತ್) (ಪಿಟಿಐ): ಸುಣ್ಣದ ಕಲ್ಲು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಗುಜರಾತ್ ಜಲ ಸಂಪನ್ಮೂಲ ಸಚಿವ ಬಾಬು ಬೊಖಿರಿಯಾ ಅವರಿಗೆ ಪೋರಬಂದರ್ ನ್ಯಾಯಾಲಯ 3ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

2006ರಲ್ಲಿ ನಡೆದ ಈ ಪ್ರಕರಣದಲ್ಲಿ ಬೊಕ್ಕಸಕ್ಕೆ  ್ಙ 54  ಕೋಟಿ ಹಾನಿ ಆಗಿತ್ತು. ಕಾಂಗ್ರೆಸ್‌ನ ಮಾಜಿ ಸಂಸದ ಭರತ್ ಒಡೇದರಾ, ಕೊಲೆ ಪ್ರಕರಣವೊಂದರಲ್ಲಿ ಜೈಲಿನಲ್ಲಿರುವ ರೌಡಿ ಭೀಮಾ ದುಲಾ ಒಡೇದರಾ ಹಾಗೂ ಈತನ ಮಗ (ಪೋರಬಂದರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ)ಲಕ್ಷ್ಮಣ್ ದುಲಾ ಒಡೇದರಾ ಕೂಡ ಮೂರು ವರ್ಷ ಜೈಲು ಶಿಕ್ಷೆಗೆ ಒಳಪಟ್ಟಿದ್ದಾರೆ. ಅಲ್ಲದೇ ಇವರೆಲ್ಲರಿಗೆ ತಲಾ  ್ಙ5 ಸಾವಿರ ದಂಡ ವಿಧಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ 2007ರಲ್ಲಿ ಬೊಖಿರಿಯಾ ಅವರನ್ನು ಬಂಧಿಸಲಾಗಿತ್ತು. ನಂತರದಲ್ಲಿ ಹೈಕೋರ್ಟ್ ಇವರಿಗೆ ಜಾಮೀನು ನೀಡಿತ್ತು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.