ಮುಂಬೈ : ಬಾಲಿವುಡ್ ನಟಿ ಸನ್ನಿ ಲಿಯೋನ್ ಮತ್ತು ಆಕೆಯ ಪತಿ ಡೇನಿಯಲ್ ವೆಬರ್ ಅವರಿದ್ದ ಖಾಸಗಿ ವಿಮಾನ ಸ್ವಲ್ಪದರಲ್ಲಿಯೇ ಅಪಘಾತದಿಂದ ಪಾರಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸನ್ನಿಲಿಯೋನ್ ಖಾಸಗಿ ವಿಮಾನವೊಂದರಲ್ಲಿ ಮುಂಬೈಗೆ ತೆರಳುತ್ತಿದ್ದರು. ಈ ವೇಳೆ ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಪತನಗೊಳ್ಳುವ ಸಂಭವವಿತ್ತು. ಈ ಸಂದರ್ಭದಲ್ಲಿ ಪೈಲಟ್ ಮುಂಜಾಗ್ರತೆ ವಹಿಸಿ ಅವಘಡವನ್ನು ತಪ್ಪಿಸಿದರು ಎಂದು ಸನ್ನಿ ಲಿಯೋನ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.