ADVERTISEMENT

ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ವಿರುದ್ಧ ದೇಶದ್ರೋಹದ ಪ್ರಕರಣ

ಏಜೆನ್ಸೀಸ್
Published 1 ಜುಲೈ 2017, 7:24 IST
Last Updated 1 ಜುಲೈ 2017, 7:24 IST
ಅಜಂ ಖಾನ್ (ಸಾಂದರ್ಭಿಕ ಚಿತ್ರ)
ಅಜಂ ಖಾನ್ (ಸಾಂದರ್ಭಿಕ ಚಿತ್ರ)   

ಮೀರತ್: ಸೇನೆಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ವಿರುದ್ಧ ಉತ್ತರಪ್ರದೇಶದ ಬಿಜ್‌ನೋರ್‌ನ ಚಾಂದ್‌ಪುರ ಪೊಲೀಸ್ ಠಾಣೆಯಲ್ಲಿ ದೇಶದ್ರೋಹದ ಪ್ರಕರಣದ ದಾಖಲಿಸಲಾಗಿದೆ.

ವಿಶ್ವ ಹಿಂದು ಪರಿಷತ್ ಮತ್ತು ಭಜರಂಗದಳ ಸಂಘಟನೆಗಳು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ‘ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 (ದೇಶದ್ರೋಹ), 131 (ಯೋಧರನ್ನು ನಿಂದಿಸುವುದು ಹಾಗೂ ಅವರ ಕರ್ತವ್ಯಕ್ಕೆ ಆಕ್ಷೇಪ ವ್ಯಕ್ತಪಡಿಸುವುದು) ಮತ್ತು 505 (ಸಾರ್ವಜನಿಕವಾಗಿ ಅವಹೇಳನಕ್ಕೆ ಗುರಿಯಾಗುವಂಥ ಹೇಳಿಕೆ ನೀಡುವುದು) ಅನ್ವಯ ಪ್ರಕರಣ ದಾಖಲಿಸಲಾಗಿದೆ’ ಎಂದು ಚಾಂದ್‌ಪುರ ಪೊಲೀಸ್‌ ಠಾಣೆಯ ಠಾಣಾಧಿಕಾರಿ ಅಜಯ್ ಕುಮಾರ್‌ ಸಿಂಗ್ ತಿಳಿಸಿದ್ದಾರೆ.

ಇತ್ತೀಚೆಗೆ ರಾಮ್‌ಪುರದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಅಜಂ ಖಾನ್, ‘ಕೆಲವು ಪ್ರದೇಶಗಳಲ್ಲಿ ಮಹಿಳೆಯರು ಯೋಧರ ಗುಪ್ತಾಂಗ ಕತ್ತರಿಸುತ್ತಿದ್ದಾರೆ. ಕಾಶ್ಮೀರ, ತ್ರಿಪುರಾ, ಜಾರ್ಖಂಡ್, ಬಂಗಾಳ ಮತ್ತಿತರ ಕಡೆಗಳಲ್ಲಿ ಅವಮಾನಕರ ಹಿಂಸೆ ನಡೆಯುತ್ತಿದೆ’ ಎಂದು ಹೇಳಿದ್ದರು. ಇದಕ್ಕೆ ವಿಶ್ವ ಹಿಂದು ಪರಿಷತ್ ಮತ್ತು ಭಜರಂಗದಳ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಪ್ರತಿಭಟನೆಯನ್ನೂ ನಡೆಸಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.