
ಪ್ರಜಾವಾಣಿ ವಾರ್ತೆಮುಂಬೈ (ಪಿಟಿಐ): ಆದರ್ಶ ಹೌಸಿಂಗ್ ಸೊಸೈಟಿ ಹಗರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರದ ಇಂಧನ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಸೋಮವಾರ ವಿಚಾರಣಾ ಸಮಿತಿಯ ಎದುರು ಹಾಜರಾಗಿ ಹೇಳಿಕೆ ನೀಡಿದರು.
2001ರಿಂದ 2003ರ ವರೆಗೆ ಮುಖ್ಯಮಂತ್ರಿಯಾಗಿದ್ದ ಶಿಂಧೆ ಅವರು ಆದರ್ಶ ಹೌಸಿಂಗ್ ಸೊಸೈಟಿಗೆ ಭೂಮಿ ಮಂಜೂರು ಮಾಡಿರುವುದಕ್ಕೆ ಸಂಬಂಧಿ ಸಿದ ಕೆಲವು ಕಡತಗಳಿಗೆ ಸಹಿ ಹಾಕಿದ್ದರು.
ಸಚಿವರಾಗಿದ್ದ ಜಯಂತ್ ಪಾಟೀಲ್ ಸಂಬಂಧಿ ಆದಿತ್ಯ ಪಾಟೀಲ್ ಅವರು ಶನಿವಾರ ಸಮಿತಿಯ ಎದುರು ಹಾಜರಾಗಿ `ಮಾಜಿ ಶಾಸಕ ಕನ್ನಯ್ಯ ಲಾಲ್ ಗಿದ್ವಾನಿ ಇಲ್ಲಿ ಫ್ಲಾಟ್ ಪಡೆಯಲು ಸಹಾಯ ಮಾಡಿದ್ದರು~ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.