ADVERTISEMENT

ಸಲಿಂಗಕಾಮಿಗಳಿಗೆ ಮಕ್ಕಳ, ಕುಟುಂಬ ಕ್ಷೇಮದ ಚಿಂತೆ...

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 19:30 IST
Last Updated 12 ಫೆಬ್ರುವರಿ 2011, 19:30 IST

ನವದೆಹಲಿ:  ವಯಸ್ಕರ ನಡುವೆ ಒಪ್ಪಿತವಾಗಿ ನಡೆಯುವ ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸಿದ್ದೇ ಆದರೆ, ಅಂಥವರ ಮಕ್ಕಳು ಸಾಮಾಜಿಕ ಬಹಿಷ್ಕಾರ, ಪೊಲೀಸರ ನಿಂದನೆ, ಸುಲಿಗೆ ಮತ್ತು ಬ್ಲ್ಯಾಕ್‌ಮೇಲ್‌ಗೆ ಒಳಗಾಗುವ ಸಾಧ್ಯತೆ ಇದೆ ಎಂದು ‘19 ಪೋಷಕರ ತಂಡ’ ಸುಪ್ರೀಂಕೋರ್ಟ್‌ನಲ್ಲಿ ಹೇಳಿದೆ.

ಸಲಿಂಗಕಾಮದ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಲು ಸುಪ್ರೀಂಕೋರ್ಟ್ ಪೋಷಕರ ತಂಡಕ್ಕೆ ಅವಕಾಶ ನೀಡಿದ್ದ ಸಂದರ್ಭದಲ್ಲಿ ಅವರು ಹೀಗೆ ಹೇಳಿದ್ದಾರೆ.

ಸಮಾಜದ ವಿವಿಧ ವರ್ಗಗಳಿಗೆ ಸೇರಿದವರನ್ನು ಆಯ್ದು ಈ 19 ಜನರ ತಂಡ ರಚಿಸಲಾಗಿದ್ದು, ಇವರನ್ನು, ಸ್ತ್ರೀ ಸಲಿಂಗಿಗಳು, ಪುರುಷ ಸಲಿಂಗಿಗಳು, ದ್ವಿಲಿಂಗಿಗಳು ಹಾಗೂ ಲಿಂಗ ಪರಿವರ್ತನೆಗೊಳಗಾದವರನ್ನು  (ಎಲ್‌ಜಿಬಿಟಿ) ಪ್ರತಿನಿಧಿಸುವ ‘ಪೋಷಕರು’ ಎಂದು ಕರೆಯಲಾಗಿದೆ.

ADVERTISEMENT

ನಿವೃತ್ತರ ಶಿಕ್ಷಕರು, ವಕೀಲರು, ಸಾಮಾಜಿಕ ಕಾರ್ಯಕರ್ತರು ಈ ತಂಡದಲ್ಲಿದ್ದಾರೆ. ಚಿತ್ರ ನಿರ್ದೇಶಕರೂ ಆದ ಲೇಖಕಿ ಹಾಗೂ ಚಳವಳಿಗಾರ್ತಿ ಚಿತ್ರ ಪಾಲೇಕರ್ ಅವರೂ ಈ ತಂಡದ ಪೋಷಕರಲ್ಲಿ ಒಬ್ಬರು. ಭಾರತೀಯ ದಂಡ ಸಂಹಿತೆಯ 377 ವಿಧಿಯು ತಮ್ಮ ಲೈಂಗಿಕ ವರ್ತನೆಯ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳಲು ತಡೆಯೊಡ್ಡುತ್ತಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.