ADVERTISEMENT

ಸಲಿಂಗಕಾಮ: ಕೇಂದ್ರದ ಸ್ಪಷ್ಟನೆ ಕೋರಿದ ‘ಸುಪ್ರೀಂ’

ಪಿಟಿಐ
Published 23 ಏಪ್ರಿಲ್ 2018, 19:59 IST
Last Updated 23 ಏಪ್ರಿಲ್ 2018, 19:59 IST

ನವದೆಹಲಿ: ಇಬ್ಬರು ವಯಸ್ಕರ ನಡುವಿನ  ಸಮ್ಮತಿಯ ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸುವುದನ್ನು ಪ್ರಶ್ನಿಸಿ ಹೋಟೆಲ್‌ ಉದ್ಯಮಿಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.

ವಾರದ ಒಳಗಾಗಿ ನೋಟಿಸ್‌ಗೆ ಉತ್ತರಿಸುವಂತೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಲ್ಲಿಸಲಾದ ಇತರ ಹಲವು ಅರ್ಜಿಗಳ ಜತೆಯಲ್ಲಿಯೇ ಇದರ ವಿಚಾರಣೆಯನ್ನೂ ಸಂವಿಧಾನ ಪೀಠವೇ ನಡೆಸಲಿದೆ.

ADVERTISEMENT

ಪರಸ್ಪರ ಒಪ್ಪಿತ ಸಲಿಂಗಕಾಮದಲ್ಲಿ ತೊಡಗುವ ಸಲಿಂಗಿಗಳು ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್ 377 ಅಡಿ ಸುಳ್ಳು ಆರೋಪ ಮತ್ತು ತಪ್ಪು ಕಾನೂನು ಕ್ರಮದ ಭೀತಿ ಎದುರಿಸುತ್ತಿದ್ದಾರೆ ಎಂದು ಹೋಟೆಲ್ ಉದ್ಯಮಿ ಕೇಶವ್ ಸೂರಿ ಆಕ್ಷೇಪ ಎತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.