ADVERTISEMENT

ಸವಾಲೆಸೆದ ಉಗ್ರನಿಗೆ ತಕ್ಕ ಪಾಠ ಕಲಿಸಿದ ಯೋಧ ರೋಹಿತ್ ಶುಕ್ಲಾ

ಏಜೆನ್ಸೀಸ್
Published 6 ಮೇ 2018, 11:50 IST
Last Updated 6 ಮೇ 2018, 11:50 IST
ಸವಾಲೆಸೆದ ಉಗ್ರನಿಗೆ ತಕ್ಕ ಪಾಠ ಕಲಿಸಿದ ಯೋಧ ರೋಹಿತ್ ಶುಕ್ಲಾ
ಸವಾಲೆಸೆದ ಉಗ್ರನಿಗೆ ತಕ್ಕ ಪಾಠ ಕಲಿಸಿದ ಯೋಧ ರೋಹಿತ್ ಶುಕ್ಲಾ

ಡೆಹ್ರಾಡೂನ್: ಅಟ್ಟಹಾಸ ಮೆರೆದು ನಾಗರಿಕರನ್ನು ರಕ್ತದ ಮಡುವಲ್ಲಿ ನೋಡುವಂತಹ ವಿಕೃತ ಮನಸ್ಸಿನ ಉಗ್ರರನ್ನು ಹೊಡೆದುರುಳಿಸುತ್ತಾ ಭಾರತೀಯರ ರಕ್ಷಣೆಗೆ ಪಣತೊಟ್ಟಿರುವ ಯೋಧರ ಮಧ್ಯೆ ಇಲ್ಲೊಬ್ಬ ವೀರ ಯೋಧ ಮತ್ತೊಂದು ಹೆಜ್ಜೆ ಮುಂದೆ ಸಾಗಿ ತಮಗೆ ಸವಾಲೆಸೆದ ಉಗ್ರನನ್ನು ಕೊಂದು ಎಲ್ಲರಿಗೂ ಹೀರೋ ಆಗಿ ನಿಂತಿದ್ದಾರೆ.

ಹೌದು ಆ ಹೀರೋ ಭಾರತೀಯ ಸೇನೆಯ ಮೇಜರ್ ರೋಹಿತ್ ಶುಕ್ಲಾ. ಯೋಧ ರೋಹಿತ್ ಶುಕ್ಲಾ ಅವರ ಗುಂಡಿಗೆ ಬಲಿಯಾದ ಉಗ್ರ ಸಮೀರ್ ಅಹಮದ್ ಭಟ್ ಅಲಿಯಾಸ್ ಸಮೀರ್ ಟೈಗರ್

ಉಗ್ರ ಸಮೀರ್ ಶುಕ್ಲಾ ಅವರಿಗೆ ‘ನೀನು ನಿನ್ನ ತಾಯಿಯ ಎದೆ ಹಾಲು ಕುಡಿದಿದ್ದೇ ಆದಲ್ಲಿ ನನ್ನ ಎದುರಿಗೆ ಬಾ ಎಂದು ಸವಾಲೆಸೆದಿದ್ದನು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆ ಕಳೆದ ಮಂಗಳವಾರ ನಡೆದಿದೆ.

ADVERTISEMENT

ಈ ವಿಡಿಯೊ ವೈರಲ್ ಆದ 18 ಗಂಟೆಗಳಲ್ಲೇ ಆತನ ಸವಾಲಿಗೆ ಉತ್ತರ ನೀಡಿದ  ಶುಕ್ಲಾ ಅವರು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಗುಂಡಿಕ್ಕಿ ಕೊಂದು ಶೌರ್ಯ ಮೆರೆದಿದ್ದಾರೆ. ಯೋಧನ ಸಾಹಸವನ್ನು ತಂದೆ ತಾಯಿ ಸೇರಿದಂತೆ ಇಡೀ ನಾಡು ಕೊಂಡಾಡಿದೆ.

ಮಾ.27ರಂದು ಶುಕ್ಲಾ ಅವರು ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರಿಂದ ಶೌರ್ಯ ಪ್ರಶಸ್ತಿ ಸ್ವೀಕರಿಸಿದ್ದರು.

ಗುಂಡಿನ ದಾಳಿ ವೇಳೆ ರೋಹಿತ್ ಶುಕ್ಲಾ ಅವರ ಕೈಗೆ  ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ತಂದೆ ಜ್ಞಾನ ಚಂದ್ರ ಶುಕ್ಲಾ ಮತ್ತು ತಾಯಿ ಲಕ್ಷ್ಮೀ ಶುಕ್ಲಾ ವೃತ್ತಿಯಲ್ಲಿ ವಕೀಲರು. ಸಹೋದರಿ ಎಲ್‌ಎಲ್‌ಬಿ ಅಭ್ಯಾಸ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.