ADVERTISEMENT

ಸಶಸ್ತ್ರಪಡೆಗಳ ಹಣಕಾಸು ಸಾಮರ್ಥ್ಯ 3 ಪಟ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 28 ಮೇ 2012, 19:30 IST
Last Updated 28 ಮೇ 2012, 19:30 IST
ಸಶಸ್ತ್ರಪಡೆಗಳ ಹಣಕಾಸು ಸಾಮರ್ಥ್ಯ 3 ಪಟ್ಟು ಹೆಚ್ಚಳ
ಸಶಸ್ತ್ರಪಡೆಗಳ ಹಣಕಾಸು ಸಾಮರ್ಥ್ಯ 3 ಪಟ್ಟು ಹೆಚ್ಚಳ   

ನವದೆಹಲಿ (ಪಿಟಿಐ): ಸಶಸ್ತ್ರ ಪಡೆಗಳಲ್ಲಿ ಸಂಗ್ರಹಣಾ ಪ್ರಕ್ರಿಯೆ ಚುರುಕುಗೊಳಿಸುವ ಉದ್ದೇಶದಿಂದ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ಸೇವಾ ಪ್ರಧಾನ ಕಚೇರಿಗಳ ಹಣಕಾಸು ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸಿದ್ದಾರೆ. ಇದರಿಂದ ಈ ಕಚೇರಿಗಳ ಹಣಕಾಸು ಸಾಮರ್ಥ್ಯ ಈಗಿರುವ 50 ಕೋಟಿಯಿಂದ 150 ಕೋಟಿ ರೂಪಾಯಿಗೆ ಏರಿಕೆಯಾಗಲಿದೆ.

ಮೂರೂ ಪಡೆಗಳ ಮುಖ್ಯಸ್ಥರಾದ ಅಡ್ಮಿರಲ್ ನಿರ್ಮಲ್ ವರ್ಮ, ಜನರಲ್ ವಿ.ಕೆ.ಸಿಂಗ್ ಹಾಗೂ ಏರ್ ಚೀಫ್ ಮಾರ್ಷಲ್ ಎನ್.ಎ.ಕೆ.ಬ್ರೌನ್ ಅವರೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಸಚಿವರು, ಸದ್ಯದ ಭದ್ರತಾ ಪರಿಸ್ಥಿತಿಯನ್ನು ವಿಸ್ತೃತವಾಗಿ ಪರಿಶೀಲಿಸಿದರು. ಸಭೆಯಲ್ಲಿ ರಕ್ಷಣಾ ಕಾರ್ಯದರ್ಶಿ ಶಶಿಕಾಂತ್ ಶರ್ಮ ಕೂಡ ಇದ್ದರು.

ಸೇನಾಪಡೆಯಲ್ಲಿ ಮಹಿಳಾ ಅಧಿಕಾರಿಗಳ ಸೇವೆಯನ್ನು ಕಾಯಂಗೊಳಿಸಲು ಹೆಚ್ಚಿನ ಮಾರ್ಗೋಪಾಯಗಳನ್ನು ಹುಡುಕುವಂತೆಯೂ ಸಚಿವರು ಮುಖ್ಯಸ್ಥರಿಗೆ ಸೂಚಿಸಿದರು.ನಂತರ ವಿ.ಕೆ.ಸಿಂಗ್ ಅವರ ಜತೆ ಆಂಟನಿ ಪ್ರತ್ಯೇಕವಾಗಿ 15 ನಿಮಿಷ ಸಮಾಲೋಚನೆ ನಡೆಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.