
ಪ್ರಜಾವಾಣಿ ವಾರ್ತೆನವದೆಹಲಿ (ಪಿಟಿಐ): ಸುಪ್ರಸಿದ್ಧ ವಕೀಲ ಶಾಂತಿಭೂಷಣ್ ಅವರಿಗೆ ಸಂಬಂಧಿಸಿದ ಸಿಡಿ ವಿವಾದ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅವರ ಪುತ್ರ ಪ್ರಶಾಂತ್‌ಭೂಷಣ್ ಭಾನುವಾರ ಹೇಳಿದ್ದಾರೆ.
ಮುಲಾಯಂ ಸಿಂಗ್‌ಯಾದವ್ ಅವರ 2006ರ ಸಂಭಾಷಣೆ ಬಳಸಿಕೊಂಡು ಸಿಡಿಯನ್ನು ಅಕ್ರಮವಾಗಿ ರೂಪಿಸಲಾಗಿದೆ. 2ಜಿ ತರಂಗಾಂತರ ಹಂಚಿಕೆ ಹಗರಣ ಮತ್ತು ಅಮರ್‌ಸಿಂಗ್ ಟೇಪು ಪ್ರಕರಣಗಳಲ್ಲಿ ಇದು ಪ್ರಭಾವ ಬೀರಲಿರುವ ಕಾರಣ ತಾವು ಕೋರ್ಟ್ ಮೊರೆ ಹೋಗುವುದಾಗಿ ಲೋಕಪಾಲ ಮಸೂದೆ ಕರಡು ರಚನಾ ಜಂಟಿ ಸಮಿತಿ ಸದಸ್ಯರೂ ಆಗಿರುವ ಅವರು ತಿಳಿಸಿದ್ದಾರೆ.
‘ಶಾಂತಿಭೂಷಣ್ ಅವರು ಸಮಿತಿಯಲ್ಲಿ ಇರುತ್ತಾರೆ. ತಪ್ಪಿತಸ್ಥರೆಂದು ಸಾಬೀತಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿ. ಆದರೆ ಸಿ.ಡಿ ನಕಲಿ ಎಂದು ತಜ್ಞರ ಪರಿಶೀಲನೆಯಿಂದ ತಿಳಿದು ಬಂದಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.