ADVERTISEMENT

ಸಿಬಿಎಸ್‌ಇ ಮಾನ್ಯತೆ ವಿಳಂಬ: ಸಿಎಜಿ ತರಾಟೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2018, 19:30 IST
Last Updated 8 ಏಪ್ರಿಲ್ 2018, 19:30 IST

ನವದೆಹಲಿ: ಮಾನ್ಯತೆ ಕೋರಿ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ ಅರ್ಜಿಗಳ ವಿಲೇವಾರಿಯಲ್ಲಿ ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ವಿಳಂಬ ಮಾಡುತ್ತಿದೆ ಎಂದು ಮಹಾಲೇಖಪಾಲರು (ಸಿಎಜಿ) ತರಾಟೆಗೆ ತೆಗೆದುಕೊಂಡಿದ್ದಾರೆ.

ನಿಯಮಗಳ ಪ್ರಕಾರ, ಮಾನ್ಯತೆ ಕೋರಿ ಶಾಲೆಗಳು ಪ್ರತಿವರ್ಷ ಜೂನ್‌ 30 ಅಥವಾ ಅದಕ್ಕಿಂತಲೂ ಮೊದಲು ಸಲ್ಲಿಸುವ ಅರ್ಜಿಗಳನ್ನು ಸಿಬಿಎಸ್‌ಇ ಆರು ತಿಂಗಳ ಒಳಗಾಗಿ ಪರಿಶೀಲಿಸಿ ಇತ್ಯರ್ಥಪಡಿಸುವುದು ಕಡ್ಡಾಯ.

ಆದರೆ, ಪರವಾನಗಿ ನೀಡದೆ ತರಗತಿ ಆರಂಭಿಸಲು ಶಾಲೆಗಳಿಗೆ ಸಿಬಿಎಸ್‌ಇ ಅವಕಾಶ ನೀಡಿದೆ ಎಂದು ಸಿಎಜಿ ವರದಿ ಹೇಳಿದೆ.

ADVERTISEMENT

203 ಅರ್ಜಿಗಳ ಪೈಕಿ 140 ಶಾಲೆಗಳಿಗೆ ಸಿಬಿಎಸ್‌ಇ ಮಾನ್ಯತೆ ನೀಡಿತ್ತು. ಅದರಲ್ಲಿ  19 ಶಾಲೆಗಳಿಗೆ ಮಾತ್ರ ಆರು ತಿಂಗಳ ಒಳಗಾಗಿ ಮಾನ್ಯತೆ ನೀಡಿದೆ. ಉಳಿದ 121 ಶಾಲೆಗಳಿಗೆ ವಿಳಂಬವಾಗಿ ಮಾನ್ಯತೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.